ಸುಳ್ಯ ವಿಧಾನಸಭಾ ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿಯಾಗಿ ಆನಂದ್ ಮಿತ್ತಬೈಲ್ ► ಎಪ್ರಿಲ್ 24 ರಂದು ನಾಮಪತ್ರ ಸಲ್ಲಿಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಎ.20. ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಕಾವು ರಂಗೇರಿರುವಂತೆಯೇ ಸುಳ್ಯ ಕ್ಷೇತ್ರದ ಎಸ್ಡಿಪಿಐ ಅಭ್ಯರ್ಥಿಯಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ, ದಲಿತ ಮುಖಂಡ ಆನಂದ ಮಿತ್ತಬೈಲ್ ಆಯ್ಕೆಯಾಗಿದ್ದಾರೆ.

ಸುಳ್ಯ ಮೀಸಲು ಕ್ಷೇತ್ರದಲ್ಲಿ ಎಸ್ಡಿಪಿಐ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂಬ ಮಾತು ಕೇಳಿ ಬಂದಿತ್ತಾದರೂ ಇದೀಗ ಜಿಲ್ಲಾ ಉಪಾಧ್ಯಕ್ಷರನ್ನೇ ಅಭ್ಯರ್ಥಿಯನ್ನಾಗಿ ಘೋಷಿಸಿ ಜಾತ್ಯಾತೀತ ಪಕ್ಷಗಳಿಗೆ ಇನ್ನಿತರ ಪಕ್ಷಗಳಿಗೆ ಸಡ್ಡು ಹೊಡೆದಿದೆ. ಎಪ್ರಿಲ್ 24 ಮಂಗಳವಾರದಂದು ಪೂರ್ವಾಹ್ನ 10.30 ಕ್ಕೆ ಆನಂದ ಮಿತ್ತಬೈಲ್ ರವರು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Also Read  ಕಡಬ: ವಾರಿಸುದಾರರಿಲ್ಲದ ದಲಿತ ಕುಟುಂಬದ ಭೂಮಿ ಅತಿಕ್ರಮಣ ಆರೋಪ - ದಲಿತ ಹಾಗೂ ಹಿಂದೂ ಪರ ಸಂಘಟನಾ ಸದಸ್ಯರ ಜಮಾವಣೆ - ಅಧಿಕಾರಿಗಳಿಗೆ ದೂರು

error: Content is protected !!
Scroll to Top