(ನ್ಯೂಸ್ ಕಡಬ) newskadaba.com, ಸೆ.15 : ಕಠ್ಮಂಡು : ನೇಪಾಳದ ನೂತನ ಹಂಗಾಮಿ ಪ್ರಧಾನಿ ಸುಶೀಲಾ ಕರ್ಕಿ ಅವರು ‘ನಾನು ಅಧಿಕಾರದ ಆಸೆಯಿಂದ ಬಂದಿಲ್ಲ, 6 ತಿಂಗಳಿಗಿಂತ ಹೆಚ್ಚು ದಿನ ಇರಲ್ಲ ‘ ಎಂದು ತಿಳಿಸಿದ್ದಾರೆ
ಹಂಗಾಮಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಹೊಸ ಸಂಸತ್ತಿಗೆ ಜವಾಬ್ದಾರಿಯನ್ನು ಹಸ್ತಾಂತರಿಸುತ್ತೇವೆ. ನಿಮ್ಮ ಬೆಂಬಲವಿಲ್ಲದೆ ನಾವು ಯಶಸ್ವಿಯಾಗುವುದಿಲ್ಲ. ಕೆ.ಪಿ.ಶರ್ಮಾ ಓಲಿ ಸರ್ಕಾರ ಉರುಳಿಸಿದ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರವ್ಯಾಪಿ ‘ಜೆನ್-ಝಡ್’ ಪ್ರತಿಭಟನೆಗಳನ್ನು ಅವರು ಶ್ಲಾಘಿಸಿದರು.
“ಪ್ರತಿಭಟನೆಯಲ್ಲಿ ಕೊಲ್ಲಲ್ಪಟ್ಟವರನ್ನು ‘ಹುತಾತ್ಮರು’ ಎಂದು ಗುರುತಿಸಲಾಗುವುದು. ಪ್ರತಿ ಸಂತ್ರಸ್ತ ಕುಟುಂಬಗಳಿಗೆ ಒಂದು ಮಿಲಿಯನ್ ನೇಪಾಳಿ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ” ಎಂದು ಘೋಷಣೆ ಮಾಡಿದರು














