Duleep trophy 2025: ರಿಯಾನ್‌ ಪರಾಗ್‌ಗೆ ಒಲಿದ ಕ್ಯಾಪ್ಟನ್‌ ಪಟ್ಟ



(ನ್ಯೂಸ್‌ ಕಡಬ) newskadaba.com, ಆ.28:‌‌ ದುಲೀಪ್ಟ್ರೋಫಿ ಟೆಸ್ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಬೆಂಗಳೂರಿನ ಬಿಸಿಸಿಐ ಸೆಂಟರ್ಆಫ್ಎಕ್ಸಲೆನ್ಸ್ಮೈದಾನದಲ್ಲಿ ನಡೆಯುತ್ತಿರುವ ಮೊದಲ ಪಂದ್ಯಲ್ಲಿ ಉತ್ತರ ವಲಯ ಮತ್ತು ಪೂರ್ವ ವಲಯ ತಂಡಗಳು ಮುಖಾಮುಖಿಯಾಗಿದೆ. ಆದರೆ, ಪಂದ್ಯದಿಂದ ಪೂರ್ವ ವಲಯ ತಂಡದ ನಾಯಕ ಅಭಿಮನ್ಯು ಈಶ್ವರನ್ಹೊರಗುಳಿದಿದ್ದಾರೆ.





ಇದಕ್ಕೂ ಮೊದಲು ಪೂರ್ವ ವಲಯ ತಂಡದ ನಾಯಕನಾಗಿ ಇಶಾನ್ಕಿಶನ್ಆಯ್ಕೆಯಾಗಿದ್ದರು. ಆದರೆ, ಗಾಯದ ಸಮಸ್ಯೆಯಿಂದ ಇಶಾನ್ಕಿಶನ್ಟೂರ್ನಿಯಿಂದ ಹೊರಗುಳಿದಿದ್ದರು. ಹಾಗಾಗಿ ಅಭಿಮನ್ಯು ಈಶ್ವರನ್ಅವರಿಗೆ ನಾಯಕ ಸ್ಥಾನ ನೀಡಲಾಗಿತ್ತು. ಆದರೆ, ಇಂದು ಟಾಸ್ವೇಳೆ ರಿಯಾನ್ಪರಾಗ್ನಾಯಕನಾಗಿ ಕಾಣಿಸಿಕೊಂಡಿದ್ದಾರೆ.






ಅಭಿಮನ್ಯು ಈಶ್ವರನ್ಜ್ವರದಿಂದ ಬಳಲುತ್ತಿದ್ದು, ಹಾಗಾಗಿ ಅವರು ಮೊದಲ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ಪಂದ್ಯದಲ್ಲಿ ರಿಯಾನ್ಪರಾಗ್ಅವರು ಪೂರ್ವ ವಲಯ ತಂಡದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಉತ್ತರ ವಲಯ ಪ್ಲೇಯಿಂಗ್ ಇಲೆವೆನ್: ಶುಭಂ ಖಜುರಿಯಾ , ಅಂಕಿತ್ ಕುಮಾರ್ (ನಾಯಕ) , ಯಶ್ ಧುಲ್ , ಆಯುಷ್ ಬದೋನಿ , ಕನ್ಹಯ್ಯಾ ವಾಧವನ್ (ವಿಕೆಟ್ ಕೀಪರ್ ) , ಸಾಹಿಲ್ ಲೋತ್ರಾ , ನಿಶಾಂತ್ ಸಿಂಧು , ಹರ್ಷಿತ್ ರಾಣಾ , ಔಕಿಬ್ ನಬಿ ದಾರ್ , ಮಯಾಂಕ್ ದಾಗರ್ , ಅರ್ಷದೀಪ್ ಸಿಂಗ್.

ಪೂರ್ವ ವಲಯ ಪ್ಲೇಯಿಂಗ್ ಇಲೆವೆನ್: ಉತ್ಕರ್ಷ್ ಸಿಂಗ್ , ಶರಣದೀಪ್ ಸಿಂಗ್ , ವಿರಾಟ್ ಸಿಂಗ್ , ರಿಯಾನ್ ಪರಾಗ್ (ನಾಯಕ) , ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್) , ಶ್ರೀದಾಮ್ ಪಾಲ್ , ಸೂರಜ್ ಸಿಂಧು ಜೈಸ್ವಾಲ್ , ಮುಖ್ತಾರ್ ಹುಸೇನ್ , ಮೊಹಮ್ಮದ್ ಶಮಿ , ಮನಿಷಿ , ಮುಖೇಶ್ ಕುಮಾರ್.

error: Content is protected !!
Scroll to Top