ವಿಟ್ಲ: ಆಸೀಫಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ರಸ್ತೆ ತಡೆದು ಪ್ರತಿಭಟನೆ ► ಬಿಜೆಪಿ ಮುಖಂಡನ ಕೊಲೆ ಯತ್ನ

(ನ್ಯೂಸ್ ಕಡಬ) newskadaba.com ವಿಟ್ಲ, ಎ.16. ಎಂಟರ ಹರೆಯದ ಬಾಲಕಿಯ ಅತ್ಯಾಚಾರ ನಡೆಸಿ ಹತ್ಯೆಗೈದಿರುವುದನ್ನು ಖಂಡಿಸಿ ರಸ್ತೆ ತಡೆ ನಡೆಸುತ್ತಿದ್ದ ವೇಳೆ ಅದೇ ದಾರಿಯಿಂದಾಗಿ ತೆರಳುತ್ತಿದ್ದ ಬಿಜೆಪಿ ಮುಖಂಡರೊಬ್ಬರ ಮೇಲೆ ತಂಡವೊಂದು ದಾಳಿ ನಡೆಸಿದ್ದು, ಬಗ್ಗೆ ಮಾಹಿತಿ ತಿಳಿದ ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿದಾಗ ಪೊಲೀಸ್ ವಾಹನದ ಮೇಲೆಯೇ ದಾಳಿ ನಡೆಸಿ ಪೊಲೀಸರಿಗೆ ದಿಗ್ಭಂಧನ ಹಾಕಿದ ಘಟನೆ ಕರ್ನಾಟಕ – ಕೇರಳ ಗಡಿ ಭಾಗದ ಬೇಡಗುಡ್ಡೆ ಎಂಬಲ್ಲಿ ಸೋಮವಾರದಂದು ನಡೆದಿದೆ.

ಕೊಳ್ನಾಡು ಬಿಜೆಪಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಹರೀಶ್ ಬೇಡಗುಡ್ಡೆ (33) ದಾಳಿಯಿಂದ ಗಾಯಗೊಂಡಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮ್ಮು ಕಾಶ್ಮೀರದ ಕಥುವಾ ಎಂಬಲ್ಲಿ ಎಂಟರ ಹರೆಯದ ಬಾಲಕಿ ಆಸಿಫಾಳನ್ನು ಮತಾಂಧರು ಕ್ರೂರವಾಗಿ ಅತ್ಯಾಚಾರಗೈದು ಬರ್ಬರವಾಗಿ ಹತ್ಯೆಗೈದಿರುವುದನ್ನು ಖಂಡಿಸಿ ಕೇರಳದಲ್ಲಿ ಬಂದ್ ನಡೆಯುತ್ತಿತ್ತು. ಅದರಂತೆ ತಂಡವೊಂದು ಕರ್ನಾಟಕದಲ್ಲೂ ಬಂದ್ ಮಾಡಲು ಯತ್ನಿಸುತ್ತಿದ್ದಾಗ ಬಲಾತ್ಕಾರದ ಬಂದ್ ಮಾಡುವುದು ಸರಿಯಲ್ಲ ಎಂಬ ರೀತಿಯಲ್ಲಿ ಬುದ್ಧಿವಾದದ ಮಾತನ್ನು ಹರೀಶ್ ಹೇಳಿದ್ದಾರೆನ್ನಲಾಗಿದೆ. ಈ ವೇಳೆ ಕಿಡಿಗೇಡಿಗಳ ತಂಡವೊಂದು ಹರೀಶ್ ಚಲಾಯಿಸುತ್ತಿದ್ದ ಬೈಕ್ ಅನ್ನು ಅಡ್ಡಗಟ್ಟಿ ಪ್ರತಿಭಟನೆಯನ್ನು ತಡೆಯಲು ಮುಂದಾಗಿರುವುದೇಕೆ? ಎಂಬ ರೀತಿಯಲ್ಲಿ ಮಾತು ಆರಂಭಿಸಿ, ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ಆರೋಪಿಸಿದ್ದಾರೆ. ಘಟನೆಯಲ್ಲಿ ಹರೀಶ್ ಅವರ ಕಿವಿಗೆ ಗಂಭೀರ ಗಾಯಗಳಾಗಿದ್ದು, ಅವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಹರೀಶ್ ಅವರು ನೌಫಲ್, ಅನ್ವರ್ ಮುಗುಳಿ, ಸಜಾದ್, ಖಲೀಲ್, ಸಫೀಕ್ ಸೇರಿದಂತೆ 30 ಕ್ಕಿಂತಲೂ ಅಧಿಕ ಮಂದಿಯ ತಂಡ ದೊಣ್ಣೆಯಿಂದ ಹಲ್ಲೆ ನಡೆಸಿ, ತಲವಾರ್ನಿಂದ ಕೊಲೆ ಮಾಡಲು ಯತ್ನಿಸಿದ್ದಾರೆಂದು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Also Read  ಡಿ. 27, 28, 29 ರಂದು ಕಾವ, ಜಾಣ ಮತ್ತು ರತ್ನ ಪರೀಕ್ಷೆ

error: Content is protected !!
Scroll to Top