Su From So: ಬಾಕ್ಸ್ ಆಫೀಸ್‌ನಲ್ಲಿ ರಕ್ಷಿತ್‌ ಶೆಟ್ಟಿ ಸಿನಿಮಾ ಹಿಂದಿಕ್ಕಿದ ʼಸು ಫ್ರಮ್ ಸೋʼ



(ನ್ಯೂಸ್ಕಡಬ) newskadaba.com . 28. ಇತ್ತೀಚಿನ ದಿನದಲ್ಲಿ ಸಿನಿಮಾಗಳು ಥಿಯೇಟರ್‌ನಲ್ಲಿ 50 ದಿನ ಪೂರೈಸಿದರೆ ಅದೇ ದೊಡ್ಡ ದಾಖಲೆ ಎನ್ನುವಂತಾಗಿದೆ. ಥಿಯೇಟರ್‌ನಲ್ಲಿ ಬಿಡುಗಡೆಯಾದ ಸಿನಿಮಾ ಎರಡು ವಾರ ಪೂರೈಸುತ್ತಿದ್ದಂತೆ ಒಟಿಟಿನಂತಹ ಡಿಜಿಟಲ್ ಫ್ಲ್ಯಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗುತ್ತದೆ. ಹಾಗಿದ್ದರೂ ಕೆಲವು ಜನಪ್ರಿಯ ನಟರ ಸಿನಿಮಾ ಮಾತ್ರ ತೆರೆ ಮೇಲೆ ಹೆಚ್ಚು ಕಾಲ ಉಳಿದು ಬಾಕ್ಸ್ ಆಫೀಸ್‌ನಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡುತ್ತಿವೆ.





ರಜನಿಕಾಂತ್, ಉಪೇಂದ್ರ, ಆಮೀರ್ ಖಾನ್ ಸೇರಿದಂತೆ ಬಹುದೊಡ್ಡ ತಾರಾಗಣ ಇದ್ದ ʼಕೂಲಿʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಕಲೆಕ್ಷನ್ ಮಾಡುತ್ತಿದೆ. ನಟ ಜೂನಿಯರ್ ಎನ್‌ಟಿಆರ್ ಹಾಗೂ ಹೃತಿಕ್ ರೋಷನ್ ಅಭಿನಯದ ʼವಾರ್ 2ʼ ಸಿನಿಮಾ ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಮುಗ್ಗರಿಸಿದೆ. ಬೇರೆ ಭಾಷೆಗಳ ಚಿತ್ರಗಳು ಈ ಮಟ್ಟಿಗೆ ಪೈಪೋಟಿ ನೀಡುತ್ತಿರುವಾಗ ಬಹುತೇಕ ಹೊಸಬರೇ ಅಭಿನಯಿಸಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಕನ್ನಡದ ‘ಸು ಫ್ರಮ್ ಸೋ’ (Su From So) ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇದೀಗ ಈ ಚಿತ್ರ ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾದ ದಾಖಲೆ ಮುರಿದಿದೆ.






ಈ ಕಡಿಮ ಬಜೆಟ್ ಸಿನಿಮಾ ಐದನೇ ವಾರದಲ್ಲೂ ಥಿಯೇಟರ್‌ಗಳಲ್ಲಿ ಗಟ್ಟಿಯಾಗಿ ನಿಂತಿದೆ. ಬಹುತೇಕ ಹೊಸಬರೇ ಮಾಡಿದ್ದ ಈ ಸಿನಿಮಾ ಪ್ರೇಕ್ಷಕರ, ವೀಕ್ಷಕರ ಮನಗೆದ್ದಿದೆ. ಸರಳ ಕಥೆಯನ್ನು ವಿಭಿನ್ನವಾಗಿ ತೆರೆ ಮೇಲೆ ತಂದಿರುವುದು ಚಿತ್ರದ ಯಶಸ್ಸಿಗೆ ಮುಖ್ಯ ಕಾರಣ. ‘ಸು ಫ್ರಮ್ ಸೋ’ ಸಿನಿಮಾ ಐದನೇ ವಾರಕ್ಕೆ ಕಾಲಿಟ್ಟಿದ್ದು 4ನೇ ವೀಕೆಂಡ್‌ನಲ್ಲೂ ಹೊಸ ದಾಖಲೆ ಕಲೆಕ್ಷನ್ ಮಾಡಿದೆ. ಸುಮಾರು 4 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಮೂಲಕ 2022ರಲ್ಲಿ ರಿಲೀಸ್‌ ಆದ ‘777 ಚಾರ್ಲಿ’ ಕಲೆಕ್ಷನ್ ಅನ್ನು ಬೀಟ್ ಮಾಡಿದೆ ಎಂದು ವರದಿಯೊಂದು ತಿಳಿಸಿದೆ.

ʼಸು ಫ್ರಮ್ ಸೋʼ ಕನ್ನಡ ಚಿತ್ರರಂಗದಲ್ಲಿ ಅತೀ ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ 5ನೇ ಸ್ಥಾನದಲ್ಲಿದೆ.

ʼಸು ಫ್ರಮ್ ಸೋʼ ಸಿನಿಮಾ ರಿಲೀಸ್ ಆಗಿ 33ನೇ ದಿನದ ವೇಳೆಗೆ 115.89 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ‘777 ಚಾರ್ಲಿ’ ಸಿನಿಮಾ 115 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ 5.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

‘ಸು ಫ್ರಮ್ ಸೋ’ ಸಿನಿಮಾದಲ್ಲಿ ಕಾಮಿಡಿ, ಎಮೋಷನಲ್, ಹಾರರ್ ಅಂಶಗಳು ಹದವಾಗಿ ಬೆರೆತುಕೊಂಡಿವೆ. ಜೆ.ಪಿ. ತುಮಿನಾಡ್‌ ನಿರ್ದೇಶನದ ಜತೆಗೆ ನಟಿಸಿದ್ದು, ರಾಜ್‌ ಬಿ. ಶೆಟ್ಟಿ, ಶನೀಲ್ ಗೌತಮ್, ಪ್ರಕಾಶ್ ಕೆ. ತುಮಿನಾಡ್‌, ದೀಪಕ್ ರೈ ಪಾಣಾಜೆ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಇದು ಜಿಯೋ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ ಆಗುವ ಸಾಧ್ಯತೆ ಇದೆ.

error: Content is protected !!
Scroll to Top