(ನ್ಯೂಸ್ ಕಡಬ) newskadaba.com, ಕಡಬ, ಆ. 25. ವಿದ್ಯಾಭಾರತಿ ಕರ್ನಾಟಕ ಇವರು ಪ್ರೇರಣಾ ಅನುದಾನಿತ ಹಿ.ಪ್ರಾ. ಶಾಲೆ ಕಡಲಕೆರೆ ಮೂಡಬಿದ್ರೆಯಲ್ಲಿ ನಡೆಸಿದ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಕಡಬ ಸರಸ್ವತೀ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಬಾಲವರ್ಗದ ಬಾಲಕರ ವಿಭಾಗದಲ್ಲಿ ಮೃದನ್ ಎಸ್. ರೈ (7ನೇ ತರಗತಿ) ಪ್ರಥಮ ಸ್ಥಾನ ಪಡೆದಿರುತ್ತಾರೆ. ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ಪೂರ್ವಿ (9ನೇ ತರಗತಿ) ತೃತೀಯ ಸ್ಥಾನ ಪಡೆದು, ಇವರು ಮುಂದೆ ನಡೆಯುವ ಪ್ರಾಂತ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ದ್ವಿಜಾ ಎಚ್. (7ನೇ), ಚಾರ್ವಿ ಎಚ್.ಎಂ. (7ನೇ), ಶಾರ್ವಿ ಎಸ್.ರೈ (7ನೇ), ಕೃತಿ ಎನ್.ಪಿ. (8ನೇ), ಜಿ. ಶಾರ್ವರಿ ಬನ್ನಿಂತ್ತಾಯ (8ನೇ) ಇವರು ಸ್ಪರ್ಧಿಸಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಕರಾದ ಶ್ರೀ ಹರೀಶ್ ಕೆರ್ಮಾಯಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಸತೀಶ್ಚಂದ್ರ ಕೆ.ಎಸ್. ಇವರು ತರಬೇತಿ ನೀಡಿರುತ್ತಾರೆ. ವಿಜೇತರಾದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ವೃಂದದವರು ಅಭಿನಂದಿಸಿರುತ್ತಾರೆ.









