(ನ್ಯೂಸ್ ಕಡಬ) newskadaba.com, ಆ.22: ನಿನ್ನೆ ಭಾರೀ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಇಳಿಕೆಯಾಗಿದೆ. ಆದರೆ, ಬೆಳ್ಳಿ ಬೆಲೆ ಭರ್ಜರಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆ ಇಂದು ಗ್ರಾಂಗೆ 2 ರೂ. ಏರಿ 118 ರೂ.ಗೆ ಮುಟ್ಟಿದೆ.
ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 92,150 ರೂ. ಇದೆ. 24 ಕ್ಯಾರೆಟ್ನ ಅಪರಂಜಿ ಚಿನ್ನದ ಬೆಲೆ 1,00,530 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 11,800 ರೂ. ಇದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 92,150 ರೂ. ಇದೆ. ಬೆಳ್ಳಿ ಬೆಲೆ ಗ್ರಾಂಗೆ 11,800 ರೂ. ಆಗಿದೆ.
ಚೆನ್ನೈನಲ್ಲಿ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 92,150 ರೂ., ದೆಹಲಿ: 92,300 ರೂ., ಕೋಲ್ಕತ್ತಾ: 92,150 ರೂ., ಅಹಮದಾಬಾದ್: 92,200 ರೂ. ಇದೆ.













