(ನ್ಯೂಸ್ ಕಡಬ) newskadaba.com, ಆ.20 : ಬೆಂಗಳೂರು ಗ್ರಾಮದ ಪಡುಬೆಟ್ಟು ರಸ್ತೆ ಬದಿ ನಿಂತಿದ್ದ ಅಲಿಮಮ್ಮ (65) ಎಂಬವರ ಕುತ್ತಿಗೆಯಿಂದ 10 ಪವನ್ ತೂಕವಿರುವ ಸರವನ್ನು ಸೆಳೆದೊಯ್ದ ಆರೋಪಿ ಸುಳ್ಯದ ಅಲೆಟ್ಟಿ ನಿವಾಸಿ ಅಬ್ದುಲ್ ರಹಿಮಾನ್ (31) ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ನೆಕ್ಕಿಲಾಡಿಯಲ್ಲಿ ಬಂಧಿಸಿ ಚಿನ್ನಾಭರಣವನ್ನು ವಶಪಡಿಸಿಕೊಂಡಿರುತ್ತಾರೆ ಎಂದು ತಿಳಿದುಬಂದಿದೆ.
ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ವೃದ್ಧೆಯನ್ನು ಮಾತನಾಡಿಸಿ ನಂತರ ಕುತ್ತಿಗೆಯಲ್ಲಿದ್ದ ಸರವನ್ನು ಸೆಳೆದೊಯ್ದ ಕುರಿತು ದೂರು ನೀಡಲಾಗಿತ್ತು. ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ತಂಡ ಕಾರ್ಯಾಚರಣೆ ನಡೆಸಿದೆ. ದರೋಡೆಗೆ ಬಳಸಿದ ಬೈಕ್ ಮತ್ತು ಅಂದಾಜು 4.54 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಕೃತ್ಯಕ್ಕೆ ಬಳಸಿದ ಬೈಕ್ ಕೂಡ ಕದಿಯಲ್ಪಟ್ಟದ್ದು ಎಂದು ತಿಳಿದುಬಂದಿದೆ.













