(ನ್ಯೂಸ್ ಕಡಬ) newskadaba.com, ಆ.18: ಹಾಲು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಲಿನಲ್ಲಿರುವ ಅನೇಕ ರೀತಿಯ ಪೋಷಕಾಂಶಗಳು ನಮ್ಮ ದೇಹಕ್ಕೆ ಪ್ರಯೋಜನಗಳನ್ನು ನೀಡುತ್ತವೆ. ಆದರೆ, ಹಾಲು ಕುಡಿದ ಬಳಿಕ ಕೆಲವು ಆಹಾರಗಳನ್ನು ಸೇವಿಸಬಾರದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಹಾಗಾದರೆ ಆ ಆಹಾರಗಳು ಯಾವುದು, ಏಕೆ ಒಳ್ಳೆಯದಲ್ಲ ಎನ್ನುವುದನ್ನು ತಿಳಿದುಕೊಳ್ಳೋಣ.
ಹಾಲು ಕುಡಿದ ಬಳಿಕ ಅನೇಕ ಮಂದಿ ಚಿಪ್ಸ್, ಖಾರದ ಬಿಸ್ಕತ್ತುಗಳು ಹಾಗೂ ಜಂಕ್ ಫುಡ್ಗಳನ್ನು ತಿನ್ನುತ್ತಾರೆ. ನಿಮಗೆ ಈ ಅಭ್ಯಾಸ ಇದ್ದಲ್ಲಿ ಕೂಡಲೇ ಇದನ್ನು ಬಿಟ್ಟುಬಿಡಿ. ಆರೋಗ್ಯ ತಜ್ಞರ ಪ್ರಕಾರ, ಹಾಲು ಕುಡಿದ ಕೂಡಲೇ ಉಪ್ಪು ಅಥವಾ ಮಸಾಲೆಯುಕ್ತ ಆಹಾರವನ್ನು ಸೇವಿಸಬಾರದು. ಇದು ಹೊಟ್ಟೆಗೆ ಸಂಬಂಧಿಸಿದ ಹಾಗೂ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.
ಬೆಲ್ಲ ಬೆರೆಸಿದ ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವು ಬೆಲ್ಲದಲ್ಲಿ ಉಪ್ಪಿನಾಂಶ ಅಧಿಕವಾಗಿರುತ್ತದೆ. ಈ ರೀತಿಯಾದ ಬೆಲ್ಲವನ್ನು ಹಾಲಿನೊಂದಿಗೆ ಸೇರಿಸುವುದು ಒಳ್ಳೆಯದಲ್ಲ. ಇದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.
ಸಿಟ್ರಸ್ ಹಣ್ಣುಗಳಾದ ಕಿತ್ತಳೆ ಹಾಗೂ ನಿಂಬೆಹಣ್ಣುಗಳನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಬೇಡಿ. ಈ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಆಮ್ಲವಿದ್ದು, ಇದು ಹಾಲಿನಲ್ಲಿರುವ ಪ್ರೋಟೀನ್ನ್ನು ಹೆಪ್ಪುಗಟ್ಟುವಂತೆ ಮಾಡುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ಹಾಗಾಗಿ ಹಾಲು ಕುಡಿದ ಬಳಿಕ ಸಿಟ್ರಸ್ ಹಣ್ಣುಗಳ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು.
ಹಾಲು ಹಾಗೂ ಮೀನನ್ನು ಒಟ್ಟಿಗೆ ಸೇವೆನೆ ಮಾಡಬಾರದು. ಇದು ಹೊಟ್ಟೆ ನೋವಿನಂತ ಸಮಸ್ಯೆಗಳಿಗೆ ಕಾರಣವಾಗಬಹುದು.
ಹಾಲು ಕುಡಿದ ಕೂಡಲೇ ಕಲ್ಲಂಗಡಿ ತಿನ್ನುವುದು ಒಳ್ಳೆಯದಲ್ಲ. ಹಾಲಿನಲ್ಲಿರುವ ಪ್ರೋಟೀನ್ ಕಲ್ಲಂಗಡಿಯಲ್ಲಿರುವ ಆಮ್ಲದೊಂದಿಗೆ ಸೇರಿಕೊಂಡಾಗ ಅದು ಹೆಪ್ಪುಗಟ್ಟುತ್ತದೆ. ಇದು ಹೊಟ್ಟೆ ನೋವು, ಅಜೀರ್ಣ ಹಾಗೂ ಆರೋಗ್ಯದ ಅಪಾಯಗಳನ್ನು ಹೆಚ್ಚು ಮಾಡುತ್ತದೆ.












