ರಂಗಭೂಮಿ ಕಲಾವಿದ ಟಿ.ಪ್ರಭಾಕರ ಕಲ್ಯಾಣಿ ನಿಧನ



(ನ್ಯೂಸ್‌ ಕಡಬ) newskadaba.com, ಆ.08: ಉಡುಪಿ: ಕಾಂತಾರ ಚಿತ್ರದಲ್ಲಿ ಅಭಿನಯಿಸಿದ್ದ ಮತ್ತೊಬ್ಬ ಸಹ ಕಲಾವಿದ ಮೃತಪಟ್ಟಿದ್ದಾರೆ.





ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಪೆರ್ಡೂರು ಮೂಲದ ಹಿರಿಯ ರಂಗಭೂಮಿ ಕಲಾವಿದ, ನಿವೃತ್ತ ಬ್ಯಾಂಕ್ ಉದ್ಯೋಗಿ ಟಿ. ಪ್ರಭಾಕರ ಕಲ್ಯಾಣಿ ಅವರು ಹೃದಯಘಾತದಿಂದ ಆ.8ರ ಶುಕ್ರವಾರ ನಿಧನರಾಗಿದ್ದರೆ. ಕಳೆದ 3 ದಿನಗಳ ಹಿಂದೆ ಹಿರಿಯಡಕ ಪೇಟೆಯಲ್ಲಿ ಇವರು ತಲೆ ಸುತ್ತಿ ಬಿದ್ದಿದ್ದರು. ಇಂದು ಮಲಗಿದಲ್ಲಿಯೇ ಹೃದಯಘಾತವಾಗಿ ಕೊನೆಯುಸಿರೆಳೆದಿದ್ದಾರೆ.






5 ವರ್ಷದ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಇವರಿಗೆ ಸ್ಟಂಟ್ ಹಾಕಲಾಗಿತ್ತು. ಮೃತರು ಪತ್ನಿ, ಓರ್ವ ಪುತ್ರ, ಅನೇಕ ಬಂಧು-ಮಿತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಬೀಡಿನ ಗುಡ್ಡೆ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

error: Content is protected !!
Scroll to Top