ಖಾತಾ ಹೆಸರಿನಲ್ಲಿ ಸರ್ಕಾರದ ಲೂಟಿ: ಜೆಡಿಎಸ್ ಮುಖಂಡ ಎಚ್‌.ಎಂ.ರಮೇಶ್‌ಗೌಡ ಆರೋಪ



(ನ್ಯೂಸ್ ಕಡಬ) newdkadaba.com, ಆ. 02 ಬೆಂಗಳೂರು: ಸ್ಥಿರಾಸ್ತಿಗಳ ಮೇಲಿನ ತೆರಿಗೆ ಹೆಚ್ಚಿಸುವ ಉದ್ದೇಶದಿಂದಲೇ ರಾಜ್ಯ ಸರ್ಕಾರವು ಬಿಬಿಎಂಪಿಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮಾಡಲು ಹೊರಟಿದೆ.







ಜನರು ‘ಬಿ’ ಖಾತಾವನ್ನು ‘ಎ’ ಖಾತೆಗೆ ಬದಲಿಸಿಕೊಳ್ಳಲು ಆರೇಳು ಲಕ್ಷ ರೂಪಾಯಿ ವೆಚ್ಚಮಾಡಬೇಕಾಗುತ್ತದೆ ಎಂದು ಜೆಡಿಎಸ್‌ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಂ.ರಮೇಶ್‌ಗೌಡ ಆರೋಪಿಸಿದ್ದಾರೆ.






ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿದ ಹಳ್ಳಿಗಳ ನಿವೇಶನಗಳಿಗೆ, ಪ್ರತಿ ಚದರ ಮೀಟರ್‌ಗೆ ಗರಿಷ್ಠ ₹250 ಸುಧಾರಣಾ ಶುಲ್ಕ ವಿಧಿಸಲಾಗುತ್ತಿತ್ತು. ಈಗ ಗ್ರೇಟರ್‌ ಬೆಂಗಳೂರು ಅಡಿಯಲ್ಲಿ ಪ್ರತಿ ಚದರ ಅಡಿಗೆ ಗರಿಷ್ಠ 500 ರು. ಸುಧಾರಣಾ ಶುಲ್ಕ ವಿಧಿಸಲು ಸರ್ಕಾರ ಸಿದ್ದತೆ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಈ ಹಿಂದೆ ಬಿಬಿಎಂಪಿ ಪ್ರತಿ ಚದರ ಮೀಟರ್‌ಗೆ 13,800 ರೂ.ಗಳ ತೆರಿಗೆ ವಿಧಿಸುತ್ತಿತ್ತು ಎಂದು ಹೇಳಿದರು. ಈ ತೆರಿಗೆ ದರವನ್ನು ರಾಜ್ಯ ಸರ್ಕಾರವು ಸರಾಸರಿ ಶೇ. 1,000ರಷ್ಟು ಹೆಚ್ಚಿಸಿದೆ ಮತ್ತು ಇದು 3-6 ಲಕ್ಷ ರೂ.ಗಳಿಂದ ಹೆಚ್ಚಳಕ್ಕೆ ಕಾರಣವಾಗುತ್ತದೆ.

error: Content is protected !!
Scroll to Top