(ನ್ಯೂಸ್ ಕಡಬ) newskadaba.com ಸವಣೂರು, ಎ.9. ಬಿಜೆಪಿ ಪಕ್ಷದ ಗೆಲುವಿನಲ್ಲಿ ಪೇಜ್ ಪ್ರಮುಖರ ಪಾತ್ರ ಮಹತ್ವದ್ದು. ಪ್ರತಿಯೊಬ್ಬರೂ ಮತದಾರರನ್ನು ಗುರುತಿಸಿ ಮತ ಚಲಾವಣೆಗೆ ಕರೆತರುವ ಮೂಲಕ ಬಿಜೆಪಿಗೆ ಅತ್ಯಧಿಕ ಮತಗಳು ದೊರಕುವಂತೆ ಮಾಡಬೇಕು. ಬಿಜೆಪಿ ಪಕ್ಷ ಕಾರ್ಯಕರ್ತರ ಪಕ್ಷ, ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ ಹೇಳಿದರು.
ಅವರು ಬೆಳಂದೂರು ಮಹಾಶಕ್ತಿ ಕೇಂದ್ರದ ಪಾಲ್ತಾಡಿಯ ಕುಂಜಾಡಿಯಲ್ಲಿ ನಡೆದ ಬಿಜೆಪಿ ಪೇಜ್ ಪ್ರಮುಖರ ಸಭೆಯಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಹಿರಿಯ ಬಿಜೆಪಿ ಮುಂದಾಳು ಬಿ.ಕೆ.ರಮೇಶ್ ಕಲ್ಲೂರಾಯ,ಪಾಲ್ತಾಡಿ ಶಕ್ತಿ ಕೇಂದ್ರದ ಪ್ರಭಾರಿ ಗಣೇಶ್ ಉದನಡ್ಕ ,ಸವಣೂರು ಗ್ರಾಮ ಪಂಚಾಯತ್ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ಉಪಸ್ಥಿತರಿದ್ದರು.
ಸಭೆಯಲ್ಲಿ ಪಕ್ಷದ ಪ್ರಮುಖರಾದ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಸುಬ್ರಾಯ ಗೌಡ, ಸುಧೀರ್ ಕುಮಾರ್ ರೈ ಕುಂಜಾಡಿ, ಸುಧಾಕರ ರೈ ಕುಂಜಾಡಿ, ಪದ್ಮಪ್ರಸಾದ್ ಆರಿಗ ಪಂಚೋಡಿ, ವಿಠಲ ಶೆಟ್ಟಿ, ಸತ್ಯಪ್ರಕಾಶ , ತಾರೇಶ್, ಸುರೇಶ್ ದೋಳ, ಉದಯ ಬಂಬಿಲ, ಸುಂದರಿ, ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಅಂಗಡಿಮೂಲೆ, ಹೊನ್ನಪ್ಪ ಗೌಡ, ಜಯಪ್ರಕಾಶ್, ಶಿವಪ್ರಸಾದ್ ಕೆ, ಮಹೇಶ್ ಕುಮಾರ್, ಶಾಂತರಾಮ, ಸುಕೇಶ್ ರೈ ಕುಂಜಾಡಿ ಮೊದಲಾದವರಿದ್ದರು. ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ ಸ್ವಾಗತಿಸಿ, ಬೂತ್ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಬೈಲಾಡಿ ವಂದಿಸಿದರು.