(ನ್ಯೂಸ್ ಕಡಬ) newskadaba.com, ಜು.15. ಡಿಸಿಎಂ ಡಿಕೆಶಿಯವರು ಮಂಗಳೂರು ರಾತ್ರಿ 7ರ ನಂತರ ಪ್ರಯೋಜನಕ್ಕೆ ಬಾರದ ಊರು ಅಂದಿದ್ದರು, ಇದೀಗ ಮರಳು, ಕೆಂಪುಕಲ್ಲನ್ನು ಬಂದ್ ಮಾಡುವ ಮುಖೇನ ಬೆಳಗ್ಗಿನಿಂದಲೇ ಪ್ರಯೋಜನಕ್ಕೆ ಬಾರದ ಊರಿನಂತೆ ಮಾಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರ ದ.ಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣವಾಗಿ ನಿಷ್ಪ್ರಯೋಜಕನ್ನಾಗಿ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದರು.
ತೊಕ್ಕೊಟ್ಟು ಸಮೀಪದ ಕೊಲ್ಯ ಸಮೀಪ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಕಾರ್ಮಿಕರ ಉದ್ಯಮ, ಕೆಲಸಗಳನ್ನು ಹತ್ತಿಕ್ಕುವ ಮೂಲಕ ಭಾವನೆಗಳಿಗೆ ಘಾಸಿಗೊಳಿಸವುದರ ಜೊತೆಗೆ ಹೊಟ್ಟೆಗೆ ಊಟವಿಲ್ಲದಂತೆ ರಾಜ್ಯ ಕಾಂಗ್ರೆಸ್ ಸರಕಾರ ಮಾಡಿದೆ. ರಾತ್ರಿ 7ರ ನಂತರ ಮಂಗಳೂರು ಪ್ರಯೋಜನಕ್ಕಿಲ್ಲದ ಊರು ಎಂದು ಡಿಕೆಶಿ ಬೆಂಗಳೂರಿನಲ್ಲಿ ಹೇಳಿದ್ದು, ಇದೀಗ ಬೆಳಗ್ಗಿನಿಂದಲೇ ಪ್ರಯೋಜನವಿಲ್ಲದಂತೆ ಮಾಡಲಾಗಿದೆ ಎಂದರು.













