ಬೆಳಂದೂರು ಗ್ರಾಮದ ಬೂತ್ 2ರ ಬಿಜೆಪಿ ಸಮಿತಿ ಸಭೆ

(ನ್ಯೂಸ್ ಕಡಬ) newskadaba.com ಸವಣೂರು, ಎ.9. ಗ್ರಾಮದ ಬೂತ್ 2ರ ಬಿಜೆಪಿ  ಸಮಿತಿಯ ಸಭೆಯು ಪ್ರತಿ 10 ದಿನಗಳಿಗೊಮ್ಮೆ ಪಕ್ಷದ ಕಾರ್ಯಕರ್ತರ ಮನೆಗಳಲ್ಲಿ ನಡೆಯುತ್ತಿದ್ದು ಈ ಬಾರಿಯ ಸಭೆಯು ದಕ್ಷಿಣ ಕನ್ನಡ ಜಿಲ್ಲಾ ಜನಾತ ಬಜಾರ್ ಇದರ ಅಧ್ಯಕ್ಷರಾದ ಉದಯ ರೈ ಮಾದೋಡಿಯವರ ಮನೆಯಲ್ಲಿ ಬೂತ್ ಸಮಿತಿಯ ಅಧ್ಯಕ್ಷರಾದ ಪ್ರಮೋದ್ ನೀರಜರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪಕ್ಷದ ಸಂಘಟನೆಯ ಬಗ್ಗೆ ಚರ್ಚೆ ನಡೆಸಿ ಪೇಜ್ ಪ್ರಮುಖರಿಗೆ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಯಿತು. ಬೆಳಂದೂರು ಶಕ್ತಿ ಕೇಂದ್ರದ ಅಧ್ಯಕ್ಷರಾದ ದಿನೇಶ್ ಮೆದು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರದ ಪ್ರಮೀಳಾ ಜನಾರ್ದನರವರು ಪಕ್ಷದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಕಾರ್ಯ ಪ್ರವತ್ತರಾಗುವಂತೆ ಸೂಚಿಸಿದರು. ಸಭೆಯಲ್ಲಿ ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮೇಶ್ವರಿ ಅಗಳಿ  ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಬಾಬು ಮಾದೋಡಿ, ಮಹಿಳಾ ಮೋರ್ಚಾದ ಕಾರ್ಯದರ್ಶಿ ಚಂಪಾ ಕುಶಾಲಪ್ಪ ಅಬೀರ , ಚಂದ್ರಯ್ಯ ಆಚಾರ್ಯ, ಹರೀಶ್ ಅಬೀರ, ಬಾಲಚಂದ್ರ ಅಬೀರ ಜನಾರ್ದನ ಅಚಾರ್ಯ, ಯೋಗೀಶ್ ಅಬೀರ, ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಜಯಂತ ಅಬೀರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
error: Content is protected !!
Scroll to Top