ಸುಳ್ಯ: ಹಾಡುಹಗಲೇ ನಾಡಿಗೆ ಬಂದ ಕಾಡಾನೆ ಹಿಂಡು ► ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಯ್ತು ಭಯಭೀತ ದೃಶ್ಯ

(ನ್ಯೂಸ್ ಕಡಬ) newskadaba.com ಸುಳ್ಯ, ಎ.08. ಕಾಡಿನಲ್ಲಿರಬೇಕಾಗಿದ್ದ ಆನೆಗಳ ಹಿಂಡು ಹಾಡುಹಗಲೇ ನಾಡಿನಲ್ಲಿ ಕಂಡುಬಂದಿದ್ದು, ನಾಗರೀಕರನ್ನು ಭಯಭೀತರನ್ನಾಗಿಸಿದ ಘಟನೆ ಸುಳ್ಯದಿಂದ ವರದಿಯಾಗಿದೆ.

ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮಕ್ಕೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಬೆಲೆ ನಾಶ ಮಾಡಿದ್ದ ಆನೆಗಳು, ಇದೀಗ ಮತ್ತೆ ನಗರವನ್ನು ಪ್ರವೇಶಿಸಿದೆ. ಸುಳ್ಯ ನಗರದ ಬಸ್ಮಡ್ಕ ನದಿ ತೀರದಲ್ಲಿ ಕಾಡಾನೆಗಳ ಹಿಂಡು ಹಾಡುಹಗಲೇ ಕಾಣಿಸಿಕೊಂಡಿದ್ದು, ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ಆನೆಗಳು ನಾಡಿಗೆ ಲಗ್ಗೆ ಇಟ್ಟಿದ್ದರಿಂದಾಗಿ ಜನರು ಭಯದಿಂದ ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆಯಲ್ಲದೆ, ನಗರ ಸಮೀಪದ ಕೃಷಿ ತೋಟಗಳಿಗೆ ನುಗ್ಗುವ ಸಾಧ್ಯತೆ ಇದ್ದು, ಇದು ಕೃಷಿಕರನ್ನು ಆತಂಕಕ್ಕೀಡುಮಾಡಿದೆ.

Also Read  ಆಲಂಕಾರು ಶ್ರೀ ಭಾರತೀ ಶಾಲಾ ವಿದ್ಯಾರ್ಥಿಗಳ ವಿಶ್ವದಾಖಲೆ ಪ್ರದರ್ಶನ

error: Content is protected !!
Scroll to Top