ಹೆಚ್ಚು ಹೊತ್ತು ಜಿಮ್‌ನಲ್ಲಿ ಸಮಯ ಕಳೆಯಬೇಡಿ; ಯಾಕೆ ಗೊತ್ತಾ ?



(ನ್ಯೂಸ್‌ ಕಡಬ) newskadaba.com ಜು.02: ಫಿಟ್‌ನೆಸ್​​ಗಾಗಿ ಜಿಮ್​​ಗೆ ಹೋಗುವುದು ಸಹಜ, ಇದು ಆರೋಗ್ಯಕ್ಕೂ ಒಳ್ಳೆಯದು, ಆದರೆ ಜಿಮ್​ನಲ್ಲಿ ಹೆಚ್ಚು ಹೊತ್ತು ಕಾಲ ಕಳೆಯುವುದು ಸರಿಯಲ್ಲ, ಎಷ್ಟು ಬೇಕು ಅಷ್ಟೇ ವರ್ಕ್​​ ಔಟ್​​ ಮಾಡುವುದು ಒಳ್ಳೆಯದು.





ವರ್ಕ್​​​​​ಔಟ್​​​ ಹೆಚ್ಚು ಹೊತ್ತು ಮಾಡಿದ್ರೆ ಇದು ಹೃದಯ ಆರೋಗ್ಯಕ್ಕೆ ಹೆಚ್ಚು ಅಪಾಯವನ್ನು ಉಂಟು ಮಾಡುತ್ತಿದೆ. ಹಿಮಾಚಲ ಪ್ರದೇಶದ 35 ವರ್ಷದ ವ್ಯಕ್ತಿಯೊಬ್ಬ ಜಿಮ್​​​​ ಮಾಡಿ ಸಾವನ್ನಪ್ಪಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್​​ ಆಗಿತ್ತು. ವ್ಯಾಯಾಮದ ತೀವ್ರತೆ , ಪೂರಕ ಬಳಕೆ ಮತ್ತು ಸ್ನಾಯುಗಳ ಮೈಕಟ್ಟುಗಳ ಹಿಂದೆ ಒಂದು ಮೌನವಾದ ಅಪಾಯ ಇದೆ ಎಂಬುದು ಯಾರಿಗೂ ಗೊತ್ತಿಲ್ಲ.






ಬೆಂಗಳೂರು ಮೂಲದ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ ಈ ಬಗ್ಗೆ ಕೆಲವೊಂದು ಸಲಹೆಗಳನ್ನು ಹಾಗೂ ಎಚ್ಚರಿಕೆಯನ್ನು ನೀಡಿದ್ದಾರೆ. ಡಾ. ದೀಪಕ್ ಕೃಷ್ಣಮೂರ್ತಿ ಅವರು ತಮ್ಮ ಎಕ್ಸ್​ ಖಾತೆ ಬಗ್ಗೆ ಹೇಳಿದ್ದಾರೆ. ಒಬ್ಬ ವ್ಯಕ್ತಿಯ ಮರಣದ ಅಕಾಲಿಕ ಅಥವಾ ಹೃದಯಾಘಾತದ ನಂತರ ಮರಣೋತ್ತರ ಪರೀಕ್ಷೆಯ ಮಾಡಲಾಗುತ್ತದೆ. ಅಲ್ಲಿ ಯಾವ ಕಾರಣದಿಂದ ಈ ಮರಣ ಸಂಭವಿಸುತ್ತದೆ ಎಂದು ಹೇಳಿದ್ದಾರೆ.

ಹಠಾತ್ ಸಾವು ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ಹಿಡಿದು ಕಾರ್ಡಿಯೊಮಯೋಪತಿ ಅಥವಾ ಚಾನೆಲೋಪತಿಯಂತಹ ಆಧಾರ ಮೇಲೆ ಹೇಳಲಾಗುತ್ತದೆ. ಸ್ಟೀರಾಯ್ಡ್ ಬಳಕೆ, ಮನರಂಜನಾ ಔಷಧಗಳು, ಧೂಮಪಾನ ಅಥವಾ ಮದ್ಯ ಸೇವನೆಯಂತಹ ಅಂಶಗಳಿಂದಲೂ ಕೂಡ ಈ ಹೃದಯಾಘಾತ ಸಂಭವಿಸಬಹುದು ಎನ್ನುತ್ತಾರೆ.

ಇನ್ನು ಅವರು ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋಗೆ ಅನೇಕರು ಕಮೆಂಟ್​​ನಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದು, ಅತಿಯಾದ ವ್ಯಾಯಾಮವು ನಿಜಕ್ಕೂ ಸಮಸ್ಯೆಯಾಗಬಹುದು, ಇದು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು ಎಂದು ಅವರು ಉತ್ತರಿಸಿದ್ದಾರೆ.

ಇನ್ನೊಬ್ಬ ಬಳಕೆದಾರ ಪ್ರೋಟೀನ್ ಶೇಕ್‌ಗಳ ಬಗ್ಗೆ ಕೇಳಿದ್ದು,, ಇದಕ್ಕೆ ಉತ್ತರಿಸಿದ ಅವರು ವಿಷಕಾರಿ ವಸ್ತುಗಳಿಂದ ಕಲಬೆರಕೆಯಾದಾಗ ಮಾತ್ರ ಈ ಘಟನೆಗಳು ನಡೆಯುತ್ತದೆ ಎಂದು ಹೇಳಿದ್ದಾರೆ.

error: Content is protected !!
Scroll to Top