(ನ್ಯೂಸ್ ಕಡಬ) newskadaba.com ಜೂ. 16. ಏಳು ತಿಂಗಳ ಗರ್ಭಿಣಿಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರು ಕಸಬಾದ ಚಿಕ್ಕಪುತ್ತೂರು ಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಚಿಕ್ಕಪುತ್ತೂರು ನಿವಾಸಿ ಚಿಂತನ್ ಎಂಬವರ ಪತ್ನಿ 7 ತಿಂಗಳ ಗರ್ಭಿಣಿ ರೇಷ್ಮಾ ಎಂದು ಗುರುತಿಸಲಾಗಿದೆ. ಚಿಂತನ್ ಪತ್ನಿ ಹಾಗೂ ಪುತ್ರಿ ಜೊತೆ ಬಾಡಿಗೆ ಮನೆಯಲ್ಲಿದ್ದು, ಅದೇ ಬಾಡಿಗೆ ಮನೆಯಲ್ಲಿ ರೇಷ್ಮಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ. ಸ್ಥಳಕ್ಕೆ ಪುತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ತನಿಖೆ ಮೂಲಕ ಕಾರಣ ತಿಳಿದು ಬರಬೇಕಿದೆ.