ನರ್ಸ್ ಸೋಗಿನಲ್ಲಿ ಬಂದು ಒಂದು ದಿನದ ಮಗುವನ್ನು ಕದ್ದೊಯ್ದ ಕಳ್ಳಿ..!

Theft, crime, Robbery

(ನ್ಯೂಸ್ ಕಡಬ) newskadaba.com ಜೂ. 14. ಒಂದು ದಿನದ ನವಜಾತ ಹಸುಗೂಸೊಂದು ಆಸ್ಪತ್ರೆಯಲ್ಲೇ ಕಳ್ಳತನವಾಗಿರುವ ಘಟನೆ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಮಾಬೂಬು ಎಂಬವರ ಒಂದು ದಿನದ ಮಗುವನ್ನು ನರ್ಸ್ ಸೋಗಿನಲ್ಲಿ ಬಂದ ಕಳ್ಳಿಯೊಬ್ಬಳು ಮಗುವಿಗೆ ಕಫ ಇದೆ ನಾನು ಅದನ್ನು ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋದವರು ಮತ್ತೆ ಬಾರದೇ ಮಗುವನ್ನು ಕದ್ದೊಯ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top