(ನ್ಯೂಸ್ ಕಡಬ) newskadaba.com ಜೂ. 13. ವಸತಿ ಸಮುಚ್ಚಯದ 12ನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು 15 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರು ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಮೃತ ವಿದ್ಯಾರ್ಥಿನಿಯನ್ನು ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಯಲ್ಲಿ ವೈದ್ಯ ದಂಪತಿಯಾಗಿರುವ ಡಾ. ಮುಮ್ತಾಝ್ ಅಹ್ಮದ್ ಮತ್ತು ಖಮರ್ಜಹಾ ಬಾನು ಎಂಬವರ ಪುತ್ರಿ ಹಿಬಾ ಐಮನ್(15) ಎಂದು ಗುರುತಿಸಲಾಗಿದೆ. ಹಿಬಾ ಐಮನ್ ಮನೆಯ ಬಾಲ್ಕನಿಯಲ್ಲಿ ಬಟ್ಟೆ ಒಣಗಲು ಹಾಕುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.