ಐತಿಹಾಸಿಕ ತಾಜ್ ಮಹಲ್ ಗೆ ಡ್ರೋನ್ ದಾಳಿಯಾಗದಂತೆ ರಕ್ಷಣೆ ಒದಗಿಸಲು ಕ್ರಮ

(ನ್ಯೂಸ್ ಕಡಬ) newskadaba.com , ಮೇ.26. ಆಗ್ರಾ: ಸಂಭಾವ್ಯ ಅಪಾಯದ ವಿರುದ್ಧ ರಕ್ಷಣೆ ಒದಗಿಸಲು ಐತಿಹಾಸಿಕ ತಾಜ್ ಮಹಲ್ ನ ಭದ್ರತೆಯನ್ನು ಹೆಚ್ಚಿಸಲು ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೀಗ ವೈಮಾನಿಕ ಬೆದರಿಕೆಗಳನ್ನು ಎದುರಿಸಲು ತಾಜ್ ಮಹಲ್ ವ್ಯಾಪ್ತಿಯಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಮೂಲಕ ತಾಜ್ ಮಹಲ್‌ನ ಭದ್ರತೆಯು ಹೆಚ್ಚು ಹೈಟೆಕ್ ಗೊಳಿಸಲಾಗುತ್ತದೆ. ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮತ್ತು ಉತ್ತರ ಪ್ರದೇಶ ಪೊಲೀಸರು ಈ ಸ್ಮಾರಕಕ್ಕೆ ರಕ್ಷಣೆ ಒದಗಿಸುತ್ತಿದ್ದಾರೆ ಎಂದು ಭದ್ರತಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭವಿಷ್ಯದಲ್ಲಿ ಉಂಟಾಗಬಹುದಾದ ವೈಮಾನಿಕ ಬೆದರಿಕೆಗಳನ್ನು ಎದುರಿಸಲು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ತಾಜ್ ಮಹಲ್ ವ್ಯಾಪ್ತಿಯಲ್ಲಿ ಡ್ರೋನ್ ವಿರೋಧಿ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತದೆ. ಈ ಮೂಲಕ ತಾಜ್ ಮಹಲ್‌ನ ಭದ್ರತೆಯು ಹೆಚ್ಚು ಹೈಟೆಕ್ ಆಗಲಿದೆ. ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮತ್ತು ಉತ್ತರ ಪ್ರದೇಶ ಪೊಲೀಸರು ಇದಕ್ಕೆ ರಕ್ಷಣೆಯನ್ನು ಒದಗಿಸುತ್ತಿದ್ದು, ಶೀಘ್ರದಲ್ಲೇ ಈ ಸ್ಮಾರಕ ಸುಧಾರಿತ ಡ್ರೋನ್ ತಟಸ್ಥೀಕರಣ ತಂತ್ರಜ್ಞಾನದ ಮೂಲಕ ಹೆಚ್ಚುವರಿ ರಕ್ಷಣೆಯನ್ನು ಪಡೆಯಲಿದೆ.

Also Read  ಭಾರತ ಮೂಲದ ವಿದ್ಯಾರ್ಥಿಗೆ ಅಪರಿಚಿತ ವ್ಯಕ್ತಿಗಳಿಂದ ದಾಳಿ

ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಮೇ 7ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ಕೇಂದ್ರಗಳ ಮೇಲೆ ಆಪರೇಷನ್ ಸಿಂದೂರ್ ಯೋಜನೆಯ ಅಡಿಯಲ್ಲಿ ನಿಖರವಾದ ದಾಳಿಗಳನ್ನು ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಫಿರಂಗಿ ಶೆಲ್ ದಾಳಿ, ಕ್ಷಿಪಣಿ ಮತ್ತು ಡ್ರೋನ್ ಗಳ ಮೂಲಕ ದಾಳಿಯನ್ನು ನಡೆಸಿತು. ಆದರೆ ಬಹುತೇಕ ಪಾಕ್ ದಾಳಿಯನ್ನು ತಡೆಯುವಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಯಶಸ್ವಿಯಾದವು. ಅನಂತರ ಎರಡು ರಾಷ್ಟ್ರಗಳ ಮಧ್ಯೆ ಕದನ ವಿರಾಮ ಘೋಷಣೆಯಾಗಿದ್ದು, ಭಾರತೀಯ ಸೇನೆಯು ತನ್ನ ರಕ್ಷಣಾ ಕಾರ್ಯಗಳನ್ನು ಮುಂದುವರಿಸಿವೆ. ಸೂಕ್ಷ್ಮ ಸ್ಥಳಗಳಲ್ಲಿ ಡ್ರೋನ್ ವಿರೋಧಿ ಕ್ರಮಗಳನ್ನು ಕೈಗೊಳ್ಳುತ್ತಿವೆ.

error: Content is protected !!
Scroll to Top