(ನ್ಯೂಸ್ ಕಡಬ) newskadaba.com , ಮೇ.17: ಭಾರತ ಸರ್ಕಾರ ಸರ್ವಪಕ್ಷದ ಸಹಕಾರದೊಂದಿದೆ ಪಾಕ್ಗೆ ಬುದ್ಧಿ ಕಲಿಸಲು ಮುಂದಾಗಿದೆ. ಸರ್ವಪಕ್ಷ ನಿಯೋಗವನ್ನು ಭಾರತದ ಮಿತ್ರರಾಷ್ಟ್ರಗಳಿಗೆ ಕಳುಹಿಸಿ ಅಲ್ಲಿ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಭಾರತ ಹೊಂದಿದೆ ಎಂದು ಸಾರುವ ಕೆಲಸ ಮಾಡಲಿದೆ. ಈ ನಿಯೋಗದ ನೇತೃತ್ವವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ಗೆ ನೀಡಲಾಗಿದೆ. ಕಾಂಗ್ರೆಸ್ ಬಿಜೆಪಿ ವಿರೋಧ ಪಕ್ಷಗಳಾಗಿದ್ದರು, ದೇಶದ ವಿಷಯ ಬಂದಾಗ ಒಟ್ಟಾಗಿರಬೇಕು ಎಂಬುವುದಾಗಿ ಈ ಮೂಲಕ ಹೇಳಿದೆ.
ಪಾಕ್ ಹಾಗೂ ಭಯೋತ್ಪಾದನೆ ಕೃತ್ಯಕ್ಕೆ ಒಂದು ಪೂರ್ಣವಿರಾಮ ಹಾಕುವ ನಿರ್ಧಾರ ಭಾರತ ಮಾಡಿದೆ. ಹೌದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಭಾರತ 26 ನಾಗರಿಕರನ್ನು ಹಾಗೂ ಸೈನಿಕರನ್ನು ಕಳೆದುಕೊಂಡಿದೆ. ಇದಕ್ಕೆ ಪ್ರತಿಕಾರವಾಗಿ ಭಾರತ ಮೇ 7ರಂದು ಆಪರೇಷನ್ ಸಿಂದೂರದ ಮೂಲಕ ಮಹತ್ವದ ಉತ್ತರ ನೀಡಿತ್ತು.
ಆಪರೇಷನ್ ಸಿಂಧೂರ್ ನಂತರ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಹೊಗಳಿದ್ದರು. ಇದೀಗ ಅವರು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಭಾರತದ ಬಲವಾದ ಸಂದೇಶವನ್ನು ಜಗತ್ತಿಗೆ ಸಾರಲು ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಲಿದ್ದಾರೆ ಎನ್ನಲಾಗಿದೆ.