ಉಡುಪಿ: ಮಲಗಿದ್ದಲ್ಲಿಯೇ ಮೆಸ್ಕಾಂ ಸಿಬ್ಬಂದಿ ಸಾವು

Death, deadbody, Waterfall

(ನ್ಯೂಸ್ ಕಡಬ) newskadaba.com , ಮೇ.17: ಉಡುಪಿ:  ಎಂ ಜಿ ಎಂ ಕಾಲೇಜ್ ಸನಿಹ ಇರುವ ಮೆಸ್ಕಾಂ ಸಿಬ್ಬಂದಿಗಳ ವಸತಿ ನಿಲಯದಲ್ಲಿ ವಾಸವಾಗಿದ್ದ ಮೆಸ್ಕಾಂ ಸಿಬ್ಬಂದಿಯೊಬ್ಬರು ಮಲಗಿದ್ದಾಗಲೇ ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ನಗರ ಠಾಣೆಯ ಪೋಲಿಸರು ತಕ್ಷಣ ಪ್ರಜ್ಞಾಹಿನ ಸ್ಥಿತಿಯಲ್ಲಿದ್ದ‌ ಮೆಸ್ಕಾಂ ಸಿಬ್ಬಂದಿಯನ್ನು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರ ನೆರವು ಪಡೆದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಅಂಬುಲೆನ್ಸ್ ವಾಹನದಲ್ಲಿ ಸಾಗಿಸಿದ್ದರು. ಪರೀಕ್ಷಿಸಿದ ವೈದ್ಯರಿಂದ ವ್ಯಕ್ತಿ ಮೃತಪಟ್ಟಿರುವುದು ತಿಳಿದುಬಂದಿತು. ಮೃತ ಮೆಸ್ಕಾಂ ಸಿಬ್ಬಂದಿಯನ್ನು ಟಿ. ಪಿ. ಸಿದ್ಧಲಿಂಗಯ್ಯ, ತುಮಕೂರು ಜಿಲ್ಲೆಯ‌ವರೆಂದು ತಿಳಿದುಬಂದಿದೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸಾವು ಸಂಭವಿಸಿದೆ. ಸಾವಿಗೆ‌ ಸ್ವಷ್ಟ ಕಾರಣ ತಿಳಿದುಬಂದಿಲ್ಲ.

error: Content is protected !!
Scroll to Top