(ನ್ಯೂಸ್ ಕಡಬ) newskadaba.com , ಮೇ.16. ಒಮ್ಮೆ ಇಳಿಕೆ ಮತ್ತೊಮ್ಮೆ ಏರಿಕೆಯಿಂದ ಚಿನ್ನದ ದರ ಹಾವು ಏಣಿ ಆಟದಂತಾಗಿದ್ದು, ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆಯಾಗಿದೆ.

ನಿರಂತರವಾಗಿ ಚಿನ್ನದ ದರ ಏರಿಕೆಯ ಆಗುತ್ತಲೇ ಇರುವುದರಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಮದುವೆ ಮುಂಜಿ ಮುಂತಾದ ಶುಭಕಾರ್ಯಗಳನ್ನು ಹತ್ತಿರದಲ್ಲೇ ಇಟ್ಟುಕೊಂಡಿರುವವರು ಏರುತ್ತಿರುವ ಚಿನ್ನದ ದರ ನೋಡಿ ಆಘಾತಕ್ಕೊಳಗಾಗುತ್ತಿದ್ದಾರೆ.
1 ಗ್ರಾಂ: 8,720 ರೂಪಾಯಿ
8 ಗ್ರಾಂ: 69,760 ರೂಪಾಯಿ
10 ಗ್ರಾಂ: 87,200 ರೂಪಾಯಿ
100 ಗ್ರಾಂ: 8,72,000 ರೂಪಾಯಿ