ರಾಜ್ಯದ 12 ಕಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ, ಭಷ್ಟ ಅಧಿಕಾರಿಗಳಿಗೆ ಶಾಕ್

(ನ್ಯೂಸ್ ಕಡಬ) newskadaba.com , ಮೇ.15. ಇಂದು ಬೆಳಂಬೆಳಿಗ್ಗೆ ತಹಶೀಲ್ದಾರ್ ಸೇರಿ ಏಳು ಸರ್ಕಾರಿ ಅಧಿಕಾರಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆದಿದೆ.ಅಕ್ರಮ ಆಸ್ತಿಗಳಿಕೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸಮಗ್ರ ಪರಿಶೀಲನೆ ನಂತರ ಇಂದು ಏಕ ಕಾಲದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ 12 ಕಡೆ ದಾಳಿ ನಡೆಸುವ ಮೂಲಕ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಲಾಗಿದೆ.

ಕಲಬುರಗಿಯ ಅಕ್ಕಮಹಾದೇವಿ ಬಡಾವಣೆಯಲ್ಲಿರುವ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ತಹಶೀಲ್ದಾರ್ ಉಮಾಕಾಂತ ಮನೆ ಕಚೇರಿ.ತೋಟದ ಮನೆ ಹಾಗು ಇತರ ಕೆಲವು ಕಡೆ ಲೋಕಾಯುಕ್ತ ದಾಳಿ ನಡೆದಿದೆ. ನಗದು ಹಣ, ಆಸ್ತಿ ದಾಖಲೆಗಳು ಸೇರಿ ಕೆಲವು ಸರ್ಕಾರಿ ದಾಖಲಾತಿಗಳು ಕೂಡ ಪತ್ತೆಯಾಗಿದ್ದು ಪರಿಶೀಲನೆ ಮಾಡಲಾಗಿದೆ. ತುಮಕೂರಿನಲ್ಲಿ ನಿರ್ಮಿತಿ ಕೇಂದ್ರದ ಎಂಡಿ ರಾಜಶೇಖರ್ ಅವರ ನಿವಾಸ ಕಚೇರಿ ಹಾಗು ಅವರ ಸಹೋದರನ ಮನೆ ಸೇರಿ 7 ಕಡೆ ದಾಳಿ ನಡೆದಿದೆ. ಆಪಾರವ ಪ್ರಮಾಣದ ಚಿನ್ನಾಭರಣ ಆಸ್ತಿ ದಾಖಲೆ ನಗದು ಹಣ ಸೇರಿ ಹಲವು ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಇನ್ನು ವಿಜಯಪುರ ನಗರದ ಸೆಂಟ್ ಜೋಸೆಫ್ ಶಾಲೆಯ ಹಿಂಭಾಗದಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತಾಲೆರ್ ನಿವಾಸದ ಮೇಲೆ ದಾಳಿ ಮಾಡಲಾಗಿದೆ.

error: Content is protected !!
Scroll to Top