(ನ್ಯೂಸ್ ಕಡಬ) newskadaba.com , ಮೇ.14. ಚೀನಾ ಪರ ಸುದ್ದಿಗಳನ್ನು ಮಾಡುವ ಚೀನಾದ ಮುಖವಾಣಿ ಗ್ಲೋಬಲ್ ಟೈಮ್ಸೌನ ಸಾಮಾಜಿಕ ಮಾಧ್ಯಮ ಖಾತೆಯನ್ನು ಭಾರತ ನಿರ್ಬಂಧಿಸಿದೆ.ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಭಾರತೀಯ ಸೇನೆಯ ಮೇಲೆ ಪರಿಶೀಲಿಸದ ಹೇಳಿಕೆಗಳನ್ನು ಹರಡಿದ್ದಕ್ಕಾಗಿ ಭಾರತ ಸರ್ಕಾರ ಇಂದು ಚೀನಾದ ಸರ್ಕಾರಿ ಸ್ವಾಮ್ಯದ ಎಕ್‌್ಸ ಹ್ಯಾಂಡಲ್ ಅನ್ನು ನಿಷೇಧಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೊದಲು ಸತ್ಯಗಳನ್ನು ಪರಿಶೀಲಿಸುವಂತೆ ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಾಧ್ಯಮಗಳಿಗೆ ಬಲವಾಗಿ ಎಚ್ಚರಿಕೆ ನೀಡಿದ ಕೆಲವು ದಿನಗಳ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದರ ಜೊತೆಗೆ ಚೀನಾದ ಪ್ರಚಾರದ ಮುಖವಾಣಿ ಚೀನಾ ಕ್ಸಿನ್ಹುವಾ ನ್ಯೂಸ್ ಅನ್ನು ಸಹ ಭಾರತ ನಿರ್ಬಂಧಿಸಿದೆ. ಚೀನಾ ಕ್ಸಿನ್ಹುವಾ ನ್ಯೂಸ್ ಹಲವು ವರ್ಷಗಳಿಂದ ಭಾರತದ ವಿರುದ್ಧ ತಪ್ಪು ಮಾಹಿತಿ, ನಕಲಿ ಸುದ್ದಿ ಮತ್ತು ಅಪಪ್ರಚಾರದಲ್ಲಿ ತೊಡಗಿದ್ದು, ಈ ಹಿನ್ನೆಲೆಯಲ್ಲಿ ಇಂತಹ ಕ್ರಮ ಕೈಗೊಳ್ಳಲಾಗಿದೆ. ಗ್ಲೋಬಲ್ ಟೈಮ್ಸ್ ನಂತರ ಎರಡನೇ ಪ್ರಮುಖ ಚೀನೀ ಸರ್ಕಾರಿ ಮಾಧ್ಯಮ ಔಟ್ಲೆಟ್ ಅನ್ನು ಸಹ ನಿರ್ಬಂಧಿಸಲಾಗಿದೆ.