‘ಭಾರತ- ಪಾಕ್‌ ಗಡಿಯಲ್ಲಿ ರಾತ್ರಿಯಿಂದ ಯಾವುದೇ ದಾಳಿ ನಡೆದಿಲ್ಲ’- ರಕ್ಷಣಾ ಇಲಾಖೆ ವಕ್ತಾರ

(ನ್ಯೂಸ್ ಕಡಬ) newskadaba.com , ಮೇ.14. ಜಮ್ಮು ಮತ್ತು ಕಾಶ್ಮೀರ, ಪಂಜಾಬ್‌, ರಾಜಸ್ಥಾನ, ಗುಜರಾತ್‌ಗೆ ಹೊಂದಿಕೊಂಡಿರುವ ಭಾರತ- ಪಾಕ್‌ ಗಡಿಯಲ್ಲಿ ಮಂಗಳವಾರ ರಾತ್ರಿಯಿಂದ ಡ್ರೋನ್‌ ಹಾರಾಟ ಸೇರಿದಂತೆ ಯಾವುದೇ ದಾಳಿ ನಡೆದಿಲ್ಲ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಡ್ರೋನ್‌ ಹಾರಾಟ, ಶೆಲ್‌ ದಾಳಿ, ರಾಕೆಟ್‌ ದಾಳಿ, ಅಂತರರರಾಷ್ಟ್ರೀಯ ಗಡಿಯಲ್ಲಿ ಪಾಕ್‌ ಕಡೆಯಿಂದ ಗುಂಡಿನ ಚಕಮಕಿ ನಡೆದಿಲ್ಲ. ಗಡಿ ಪ್ರದೇಶಗಳು ಶಾಂತವಾಗಿದ್ದು, ಜನಜೀವನ ಸಹಜವಾಗಿದೆ ಎಂದು ವಕ್ತಾರು ಹೇಳಿದ್ದಾರೆ. ನಿನ್ನೆ ಗಡಿಜಿಲ್ಲೆಗಳನ್ನು ಹೊರತುಪಡಿಸಿ ಜಮ್ಮು- ಕಾಶ್ಮೀರದ ಉಳಿದೆಡೆ ಶಾಲಾ- ಕಾಲೇಜುಗಳು ಪುನರಾಂಭಗೊಂಡಿದೆ.

error: Content is protected !!
Scroll to Top