ರಾಜ್ಯದ ಹಲವೆಡೆ ಇಂದು ಗುಡುಗು ಸಹಿತ ಮಳೆ ಸಾಧ್ಯತೆ

(ನ್ಯೂಸ್ ಕಡಬ) newskadaba.com, ಮೇ.06: ರಾಜ್ಯದಲ್ಲಿ ಹಲವೆಡೆ ಮುಂದಿನ ಎರಡು ದಿನ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಮೇ 6ರಂದು ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಕೊಡಗು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮರಾಠವಾಡದಿಂದ ದಕ್ಷಿಣ ತಮಿಳುನಾಡಿವರೆಗೆ ಇರುವ ಉತ್ತರ ದಕ್ಷಿಣ ವಾಯುಭಾರ ಕುಸಿತವು ಆಗ್ನೇಯ ಮಧ್ಯಪ್ರದೇಶದಿಂದ ದಕ್ಷಿಣ ಒಳನಾಡಿವರೆಗೆ ಮರಾಠವಾಡ, ತೆಲಂಗಾಭ, ಉತ್ತರ ಒಳನಾಡಿನ ಕರ್ನಾಟಕದಾದ್ಯಂತ ಸಮುದ್ರ ಮಟ್ಟದಿಂದ 0.9ಕಿ.ಮೀ ಎತ್ತರದಲ್ಲಿ ವಾಯು ಪರಿಚಲನೆ ಉಂಟಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Also Read  ಕಡಬ: ಮಸೀದಿಯಲ್ಲಿ ಕರ್ಕಶ ಧ್ವನಿವರ್ಧಕ ಬಳಕೆಯ ಆರೋಪ ➤ ಹಿಂದೂ ಸಂಘಟನೆಯಿಂದ ಕಡಬ ಪೊಲೀಸರಿಗೆ ದೂರು

 

error: Content is protected !!
Scroll to Top