ಗಡಿಯುದ್ದಕ್ಕೂ ನಿಲ್ಲದ ಗುಂಡಿನ ಚಕಮಕಿ, ಪಾಕ್ ಅಪ್ರಚೋದಿತ ದಾಳಿ, ಸೇನೆಯಿಂದ ದಿಟ್ಟ ಉತ್ತರ

(ನ್ಯೂಸ್ ಕಡಬ) newskadaba.com, ಮೇ.03. ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌ಸಿ) ಉದ್ದಕ್ಕೂ ವಿವಿಧ ವಲಯಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಪಡೆಗಳ ನಡುವೆ ಸತತ ಒಂಬತ್ತನೇ ರಾತ್ರಿಯೂ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದಾಗ್ಯೂ, ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಪಾಕಿಸ್ತಾನ ಪಡೆಗಳು ಪ್ರಾರಂಭಿಸಿದ ಗಡಿ ಘರ್ಷಣೆಗಳಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ.ಗಡಿಯುದ್ದಕ್ಕೂ ಸತತ ಒಂಬತ್ತು ರಾತ್ರಿಗಳ ಅಪ್ರಚೋದಿತ ಗುಂಡಿನ ದಾಳಿ ಇದಾಗಿದ್ದು, ಇದು ಹೆಚ್ಚಾಗಿ ನಿಯಂತ್ರಣ ರೇಖೆಗೆ ಸೀಮಿತವಾಗಿತ್ತು.

Also Read  ಪೆನ್ಸಿಲ್ ಸಿಪ್ಪೆ ಗಂಟಲಲ್ಲಿ ಸಿಲುಕಿ ಬಾಲಕಿ ಮೃತ್ಯು..!

ಅಂತರರಾಷ್ಟ್ರೀಯ ಗಡಿಯಲ್ಲಿ (ಐಬಿ) ಒಂದೇ ಒಂದು ಗುಂಡಿನ ದಾಳಿ ನಡೆದಿದೆ.ಏಪ್ರಿಲ್ 22 ರಂದು ಪಹಲ್ಲಾಮ್‌ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಉದ್ವಿಗ್ನತೆಯ ಮಧ್ಯೆ ಉಭಯ ಕಡೆಗಳ ನಡುವೆ ಗುಂಡಿನ ದಾಳಿ ನಡೆದಿದೆ.

error: Content is protected !!
Scroll to Top