ಕೋಲ್ಕತ್ತಾ ಹೋಟೆಲ್‌ವೊಂದರಲ್ಲಿ ಭೀಕರ ಬೆಂಕಿ ಅವಘಡ, 15 ಮಂದಿ ಸಾವು

(ನ್ಯೂಸ್ ಕಡಬ) newskadaba.com ಎ. 30: ಕೋಲ್ಕತ್ತಾ: ಮೆಚುಪಟ್ಟಿ ಪ್ರದೇಶದ ಹೋಟೆಲ್‌ವೊಂದರಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು,ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ 15 ಜನರು ಸಾವನ್ನಪ್ಪಿದ್ದಾರೆ ಮಧ್ಯ ಕೋಲ್ಕತ್ತಾದಲ್ಲಿರುವ 6 ಮಹಡಿಯ ಹೋಟಲ್‌ನ 42 ಕೊಠಡಿಗಳಲ್ಲಿ 88 ಅತಿಥಿಗಳಿದ್ದರು,ಕಳೆದ ರಾತ್ರಿ ಈ ಬೆಂಕಿ ಅವಘಡ ಸಂಭವಿಸಿದೆ.

ಸುಮಾರು 13 ಮಂದಿ ಗಾಯಗೊಂಡಿದ್ದಾರೆ ಅಧರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಡಿಮೆ ವೆಚ್ಚದ ರಿತುರಾಜ್‌ ಹೋಟೆಲ್‌ನಲ್ಲಿ ರಾತ್ರಿ7:30 ರ ಸುಮಾನಲ್ಲಿ ಹೊಗೆ ಕಾಣಿಸಿಕೊಂಡಿದ್ದು ಅಲ್ಲಿದ್ದವರು ಚೀರಾಡುತ್ತಾ ಹೊರಗೆ ಓಡಿಬಂದಿದ್ದಾರೆ.

ಹತ್ತು ಅಗ್ನಿಶಾಮಕ ವಾಹನ ಸ್ಥಳಕ್ಕೆ ಬಂದು ಸಿಬ್ಬಂದಿ ಇಂದು ಬೆಳಿಗ್ಗೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌‍ಐಟಿ) ರಚಿಸಲಾಗಿದೆ. ಮೃತರಲ್ಲಿ 11 ಪುರುಷರು ಸೇರಿದ್ದಾರೆ, ಅವರಲ್ಲಿ ಎಂಟು ಮಂದಿಯನ್ನುಗುರುತಿಸಲಾಗಿದೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ನಮ ಫೋರೆನ್ಸಿಕ್‌ ತಂಡವು ಪರಿಶೀಲಿಸುತ್ತದೆ ಎಂದು ಪೊಲೀಸ್‌‍ ಅಧಿಕಾರಿ ಹೇಳಿದರು.

error: Content is protected !!
Scroll to Top