(ನ್ಯೂಸ್ ಕಡಬ) newskadaba.com ಎ. 30: ಜಮ್ಮು ಮತ್ತು ಕಾಶ್ಮೀರದ ಪಹಲ್ಗಮ್ ಘಟನೆಯ ನಂತರ ಉಗ್ರರ ವಿರುದ್ದ ಕಾರ್ಯಾಚಾರಣೆ ನಡೆಸಲು ಸೇನಾ ಪಡೆಗಳಿಗೆ ಮುಕ್ತ ಸ್ವತಂತ್ರ್ಯ ನೀಡಿರುವ ಬೆನ್ನಲ್ಲೇ, ಮುಂದಿನ 24-36 ಗಂಟೆಗಳಲ್ಲಿ ಭಾರತ ಮಿಲಿಟರಿ ಕಾರ್ಯಾಚರಣೆ ನಡೆಸಲು ಯೋಜಿಸುತ್ತಿದೆ ಎಂದು ಪಾಕ್ ಸಚಿವ ಅತಾವುಲ್ಲಾ ತರಾರ್ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಸೇನಾ ಕ್ರಮ ಕೈಗೊಂಡರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಭಾರತ ತೆಗೆದುಕೊಂಡಿರುವ ಕೆಲವು ಬಿಗಿಯಾದ ಕ್ರಮಗಳಿಂದ ಪಾಕಿಸ್ತಾನಕ್ಕೆ ಆತಂಕ ಶುರುವಾಗುವಂತೆ ಮಾಡಿದೆ. 24-36 ಗಂಟೆಯೊಳಗೆ ಭಾರತ ನಮ ಮೇಲೆ ದಾಳಿ ನಡೆಸಬಹುದು ಎಂದು ಪಾಕಿಸ್ತಾನ ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ. ಭಾರತ ಮಿಲಿಟರಿ ದಾಳಿಯನ್ನು ಯೋಜಿಸುತ್ತಿದೆ ಎಂದು ಸೂಚಿಸುವ ವಿಶ್ವಾಸಾರ್ಹ ಗುಪ್ತಚರ ಮಾಹಿತಿಯನ್ನು ನಾವು ಹೊಂದಿದ್ದೇವೆ ಎಂದು ಪಾಕ್ ಸಚಿವ ಅತ್ತೌಲ್ಲಾ ತರಾರ್ ಹೇಳಿದ್ದಾರೆ.