(ನ್ಯೂಸ್ ಕಡಬ) newskadaba.com , ಮಾ.28: ಈ ವರ್ಷದ ಮೊದಲ ಸೂರ್ಯ ಗ್ರಹಣವು ನಾಳೆ ಸಂಭವಿಸಲಿದ್ದು, ಇದು ಭಾಗಶಃ ಸೂರ್ಯ ಗ್ರಹಣ ಎನ್ನಲಾಗಿದೆ.
ಸಮಯದ ವ್ಯತ್ಯಾಸ ಇರುವ ಕಾರಣ ಈ ಅಪರೂಪದ ವಿದ್ಯಮಾನವು ಭಾರತದಲ್ಲಿ ಗೋಚರಿಸುವುದಿಲ್ಲ.ಆಫ್ರಿಕಾ, ಅಮೇರಿಕಾ, ಏಷ್ಯಾದ ಕೆಲ ಭಾಗಗಳು, ಯುರೋಪ್ ನಲ್ಲಿ ಈ ವಿದ್ಯಮಾನವನ್ನು ಕಾಣಬಹುದಾಗಿದೆ ಎಂದು ನಾಸಾ ತಿಳಿಸಿದೆ.
ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2.20ಕ್ಕೆ ಆರಂಭವಾಗುವ ಗ್ರಹಣ ಸಂಜೆ 6.13ಕ್ಕೆ ಮುಕ್ತಾಯಗೊಳ್ಳಲಿದೆ.