(ನ್ಯೂಸ್ ಕಡಬ) newskadaba.com , ಮಾ.28: ಮೆಟ್ರೋ, ಬಸ್ ಪ್ರಯಾಣದರ, ಹಾಲು, ವಿದ್ಯುತ್ ದರ ಏರಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸರಣಿ ಬೆಲೆ ಏರಿಕೆಯಿಂದ ಹೈರಾಣಾಗಿರುವ ಶ್ರೀಸಾಮಾನ್ಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಇದೇ ರೀತಿ ನಿರಂತರ ಬೆಲೆ ಏರಿಕೆಯಾದರೆ ಹೇಗೆ ಬದುಕಬೇಕೆಂದು ಅಲವತ್ತುಕೊಂಡಿದ್ದಾರೆ.


ರೈತರ ನೆಪ ಹೇಳಿಕೊಂಡು ಹಾಲು, ಮೊಸರಿಗೆ 4ರೂ. ದರ ಹೆಚ್ಚಿಸಿ ಸರ್ಕಾರ ಜನಸಾಮಾನ್ಯರನ್ನು ಸುಲಿಗೆ ಮಾಡಲು ಹೊರಟಿದೆ. ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಡಬೇಕೆಂ ದಿದ್ದರೆ ಹಿಂಡಿ, ಬೂಸಾ ದರ ಕಡಿಮೆ ಮಾಡಬೇಕಿತ್ತು. ಅದನ್ನು ಬಿಟ್ಟು ಗ್ರಾಹಕರನ್ನು ಸುಲಿಗೆ ಮಾಡಿ ರೈತರಿಗೆ ಉಪಯೋಗ ಮಾಡುವುದು ಎಷ್ಟು ಸಮಂಜಸ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.