ಇಂದಿನಿಂದ ದೆಹಲಿ ವಿಧಾನಸಭೆಯ ಅಧಿವೇಶನ ಆರಂಭ; ನಾಳೆ ಬಜೆಟ್ ಮಂಡನೆ

(ನ್ಯೂಸ್ ಕಡಬ) newskadaba.com, ಮಾ. 24:  ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನ ಇಂದಿನಿಂದ ಪ್ರಾರಂಭವಾಗಲಿದೆ. ಖೀರ್ ಸಮಾರಂಭದೊಂದಿಗೆ ಬಜೆಟ್ ಅಧಿವೇಶನವು ಆರಂಭವಾಗಲಿದೆ.

27 ವರ್ಷಗಳ ಬಳಿಕ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರ ಮಾರ್ಚ್ 25ರಂದು ಮೊದಲ ಬಜೆಟ್ ಮಂಡಿಸಲಿದೆ. ಮಾರ್ಚ್ 24ರಿಂದ ಮಾರ್ಚ್ 28ರ ವರೆಗೆ ಈ ಅಧಿವೇಶನ ನಡೆಯಲಿದೆ. ನಾಳೆ ನಡೆಯಲಿರುವ ಅಧಿವೇಶನದಲ್ಲಿ ದೆಹಲಿ ಸಿಎಂ ರೇಖಾ ಗುಪ್ತ ಅವರು 2025-26ನೇ ಹಣಕಾಸು ವರ್ಷದ ಬಜೆಟ್ ಮಂಡಿಸಲಿದ್ದಾರೆ. ಎಂ ರೇಖಾ ಗುಪ್ತಾ ಅವರು, ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮಹಿಳೆಯರಿಗೆ ಮಾಸಿಕ 2,500, ವರ್ಷಕ್ಕೆ 2 ಉಚಿತ ಸಿಲಿಂಡರ್, ಯುವಕರು, ಕಾರ್ಮಿಕರ ಜೀವನ ಮಟ್ಟ ಸುಧಾರಿಸುವ ಯೋಜನೆಗಳಿಗೆ ಅನುದಾನ ಘೋಷಣೆ ಮಾಡುವ ನಿರೀಕ್ಷೆ ಇದೆ. ಇದರೊಂದಿಗೆ ಆಪ್ ಸರ್ಕಾರದ ಉಚಿತ ಯೋಜನೆಗಳನ್ನು ಮುಂದುವರಿಸುವ ಸಾಧ್ಯತೆ ಇದೆ. ಹಾಗೂ ಡಿಟಿಸಿ ಕಾರ್ಯವೈಖರಿ ಕುರಿತು ಸಿಎಜಿ ವರದಿಯನ್ನೂ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾಗುಗುತ್ತದೆ ಎನ್ನಲಾಗಿದೆ.

error: Content is protected !!
Scroll to Top