ಬಂಟ್ವಾಳ: ಒಂದೇ ಟಯರ್‌ನಲ್ಲಿ ಬಸ್ ಸಂಚಾರ; ಸಾರ್ವಜನಿಕರ ಆಕ್ರೋಶ

(ನ್ಯೂಸ್ ಕಡಬ) newskadaba.com, ಮಾ. 24: ವಿಟ್ಲ ಮತ್ತು ಮುಡಿಪು ನಡುವೆ ಸತತ ಎರಡು ದಿನಗಳಿಂದ ಒಂದೇ ಹಿಂಬದಿಯ ಟೈರ್‌ನೊಂದಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸನ್ನು ಸಾರ್ವಜನಿಕರು ತಡೆದು ವಿಟ್ಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ವಿಟ್ಲ, ಮುಡಿಪು ಮತ್ತು ಮಂಗಳೂರು ನಡುವೆ ಸಂಚರಿಸುವ ‘ಸಾರಾ’ ಎಂಬ ಖಾಸಗಿ ಬಸ್ಸಿನ ಬಸ್ಸಿನ ಹಿಂದಿನ ಎಡಭಾಗದಲ್ಲಿ ಒಂದೇ ಚಕ್ರದಲ್ಲಿ ಸಂಚರಿಸುತ್ತಿತ್ತು. ಇನ್ನೊಂದು ಟಯರ್ ಒಡೆದು ವಿಚಿತ್ರ ಶಬ್ದ ಬರುತ್ತಿದ್ದರೂ ಚಾಲಕ, ನಿರ್ವಾಹಕ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಶನಿವಾರ ಮಧ್ಯಾಹ್ನದಿಂದ ರವಿವಾರ ಮಧ್ಯಾಹ್ನ ತನಕ ವಿಟ್ಲ ಮುಡಿಪು ಮಂಗಳೂರು ಮಧ್ಯೆ ಹಿಂಬದಿಯ ಒಂದೇ ಟಯರ್ ನಲ್ಲಿ ಸಂಚರಿಸುತ್ತಿದ್ದುದ್ದನ್ನು ಗಮನಿಸಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!
Scroll to Top