ರಾಜ್ಯದಲ್ಲಿ ನಕ್ಸಲರ ಹತ್ತಿಕ್ಕಲು 201 ಕೋಟಿ ರೂ. ಖರ್ಚು: ರಾಜ್ಯ ಸರ್ಕಾರ

(ನ್ಯೂಸ್ ಕಡಬ) newskadaba.com ಮಾ. 21: ಬೆಂಗಳೂರು: ರಾಜ್ಯದಲ್ಲಿ ನಕ್ಸಲರನ್ನು ಹತ್ತಿಕ್ಕಲು 2008 ರಿಂದ ಇಲ್ಲಿಯವರೆಗೆ 201 ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಗುರುವಾರ ಮಾಹಿತಿ ನೀಡಿದೆ.

ನಕ್ಸಲಿಸಂ ನಿಗ್ರಹಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳು ಮತ್ತು ಮಾಡಿದ ವೆಚ್ಚಗಳ ಕುರಿತು ಗುರುವಾರ ಪರಿಷತ್ತಿನಲ್ಲಿ ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ಅವರು ಕೇಳಿದ ಪ್ರಶ್ನೆಗೆ ಗೃಹ ಸಚಿವ ಪರಮೇಶ್ವರ್ ಅವರು ಉತ್ತರಿಸದರು. ಕರ್ನಾಟಕದಲ್ಲಿ ನಕ್ಸಲರನ್ನು ಹತ್ತಿಕ್ಕಲು 2008 ರಿಂದ ಇಲ್ಲಿಯವರೆಗೆ 201 ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡಲಾಗಿದೆ ಇದರಲ್ಲಿ, 2018 ರಿಂದ ಫೆಬ್ರವರಿ 2025 ರವರೆಗೆ ವೇತನಕ್ಕಾಗಿ 150 ಕೋಟಿ ರೂ. ಮತ್ತು 2008 ರಿಂದ ಮಾರ್ಚ್ 4, 2025 ರವರೆಗೆ ವೇತನೇತರ ವೆಚ್ಚಗಳಿಗಾಗಿ 51.31 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

Also Read  ದೇವಸ್ಥಾನದಲ್ಲಿ ಭಕ್ತರ ತಲೆ ಮೇಲೆ ಕಾಲಿಟ್ಟ ಪುಡಿ ರೌಡಿ!

error: Content is protected !!
Scroll to Top