(ನ್ಯೂಸ್ ಕಡಬ) newskadaba.com ಮಾ. 19 : ಬೆಂಗಳೂರು: ಗಡಿನಾಡು ಮತ್ತು ಹೊರನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಈ ಮೊದಲು ನಿಗದಿಗೊಳಿಸಿದ್ದ CET ಕನ್ನಡ ಭಾಷಾ ಪರೀಕ್ಷೆಯನ್ನು ಏಪ್ರಿಲ್ 18ಕ್ಕೆ ಬದಲಾಗಿ ಏಪ್ರಿಲ್ 15ರಂದೇ ನಡೆಸಲಾಗುವುದು ಎಂದು ಕೆಇಎ ಪ್ರಕಟಿಸಿದೆ.


ಏಪ್ರಿಲ್ 18ರಂದು ಶುಭ ಶುಕ್ರವಾರ ಇರುವುದರಿಂದ ಈ ಪರೀಕ್ಷೆ ದಿನಾಂಕವನ್ನು ಬದಲಾಯಿಸಬೇಕೆಂದು ಕೋರಿಕೆಗಳು ಬಂದಿದ್ದವು, ಆ ಹಿನ್ನೆಲೆಯಲ್ಲಿ ಸರಕಾರದ ನಿರ್ದೇಶನದಂತೆ ಈ ಬದಲಾವಣೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಉಳಿದ ಪರೀಕ್ಷೆಗಳು ನಿಗದಿಯಂತೆ ಏ.16 ಮತ್ತು 17ರಂದು ನಡೆಯಲಿದೆ.