(ನ್ಯೂಸ್ ಕಡಬ) newskadaba.com ಮಾ. 19 : ಮಣಿಪುರ ರಾಜ್ಯದಲ್ಲಿ ಕಾನೂನು ಮತ್ತು ಮಾನವೀಯ ಬೆಂಬಲವನ್ನು ಬಲಪಡಿಸಲು ಸುಪ್ರೀಂ ಕೋರ್ಟ್‌ನ ಆರು ನ್ಯಾಯಾಧೀಶರ ನಿಯೋಗ ಮಾರ್ಚ್ 22 ರಂದು ಭೇಟಿ ನೀಡಲಿದೆ.


ಹಿಂಸಾಚಾರಗಳಿಂದಾಗಿ ಸ್ಥಳಾಂತರಗೊಂಡ ಜನರು ವಾಸಿಸುತ್ತಿರುವ ಪರಿಹಾರ ಶಿಬಿರಗಳಿಗೆ ನಿಯೋಗ ಭೇಟಿ ನೀಡಲಿದೆ ಎಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ. ಬಿ.ಆರ್.ಗವಾಯಿ, ಸೂರ್ಯ ಕಾಂತ್, ವಿಕ್ರಮ್ ನಾಥ್, ಎಂ.ಎಂ. ಸುಂದರೇಶ್, ಕೆ.ವಿ. ವಿಶ್ವನಾಥನ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರು ಮಣಿಪುರಕ್ಕೆ ಭೇಟಿ ನೀಡಲಿರುವ ಜಡ್ಜ್‌ಗಳಾಗಿದ್ದಾರೆ.