(ನ್ಯೂಸ್ ಕಡಬ) newskadaba.com ಮಾ. 18 : ನವದೆಹಲಿ: ನಟ ಅಮಿತಾಭ್ ಬಚ್ಚನ್ ಅವರು 2024-25ನೇ ಸಾಲಿನಲ್ಲಿ ಎಷ್ಟು ತೆರಿಗೆ ಪಾವತಿ ಮಾಡಿದ್ದಾರೆ ಎಂಬ ವಿಚಾರ ರಿವೀಲ್ ಆಗಿದೆ.


ಅವರು 120 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದಾರೆ, ಈ ಮೂಲಕ ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಹೀರೋ ಎನಿಸಿಕೊಂಡಿದ್ದಾರೆ. ಅಮಿತಾಭ್ ಬಚ್ಚನ್ ಹಂತ ಹಂತವಾಗಿ ತೆರಿಗೆ ಪಾವತಿ ಮಾಡಿದ್ದಾರೆ. ಕೊನೆಯ ಕಂತಿನಲ್ಲಿ ಅವರು 52.50 ಕೋಟಿ ರೂಪಾಯಿ ತೆರಿಗೆ ಪಾವತಿ ಮಾಡಿದ್ದಾರೆ. ಈ ಆರ್ಥಿಕ ವರ್ಷದಲ್ಲಿ ಅವರು 350 ಕೋಟಿ ರೂ. ಸಂಪಾದಿಸಿದ್ದಾರೆ. ಕಳೆದ ವರ್ಷ ಬಚ್ಚನ್ ಅವರು 72 ಕೋಟಿ ರೂ. ತೆರಿಗೆ ಪಾವತಿ ಮಾಡಿದ್ದರು. ಈ ಬಾರಿ ಅವರ ಗಳಿಕೆಯಲ್ಲಿ ತೀವ್ರ ಗತಿಯಲ್ಲಿ ಏರಿಕೆ ಕಂಡಿದೆ.