ಆರೋಗ್ಯ ವಿಮೆ ಕ್ಷೇತ್ರಕ್ಕೆ ಕಾಲಿಟ್ಟ ಎಲ್‌ಐಸಿ, ಮಾರ್ಚ್‌ 31ಕ್ಕೆ ಅಧಿಕೃತ ಘೋಷಣೆ!



(ನ್ಯೂಸ್ ಕಡಬ) newskadaba.com ಮಾ18 ಮುಂಬೈ: ಇಲ್ಲಿಯವರೆಗೂ ಜೀವವಿಮೆ ಕ್ಷೇತ್ರ ಬಿಟ್ಟು ಬೇರೆ ಯಾವ ಸೇವೆ ಕೂಡ ನೀಡದೇ ಇದ್ದ ಭಾರತೀಯ ಜೀವ ವಿಮಾ ಕಂಪನಿ ಅಂದರೆ ಎಲ್‌ಐಸಿ ಯು ಶೀಘ್ರದಲ್ಲಿಯೇ ಆರೋಗ್ಯ ವಿಮೆ ಕ್ಷೇತ್ರಕ್ಕೆ ಕಾಲಿಡಲಿದೆ. ಈ ಬಗ್ಗೆ ಲೈಫ್‌ ಇನ್ಶುರೆನ್ಸ್ ಕಾರ್ಪೋರೇಷಷನ್‌ ಆಫ್‌ ಇಂಡಿಯಾದ ಸಿಇಒ ಸಿದ್ಧಾರ್ಥ್‌ ಮೊಹಾಂತಿ ಮಾತನಾಡಿದ್ದು, ಆರೋಗ್ಯ ವಿಮೆ ಕ್ಷೇತ್ರಕ್ಕೆ ಪ್ರವೇಶಿಸುವ ನಿಟ್ಟಿನಲ್ಲಿ ಕಂಪನಿಯೊಂದರ ಷೇರುಗಳ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಮಾರ್ಚ್ 31 ರ ಮೊದಲು ಒಪ್ಪಂದವನ್ನು ಅಂತಿಮಗೊಳಿಸುವ ಗುರಿಯನ್ನು ಕಂಪನಿಯು ಹೊಂದಿದೆ ಆದರೆ ಸ್ವಾಧೀನಪಡಿಸಿಕೊಂಡ ವಿಮಾದಾರರಲ್ಲಿ ಬಹುಪಾಲು ಪಾಲನ್ನು ಎಲ್‌ಐಸಿ ಹೊಂದಿರುವುದಿಲ್ಲ. ಇದರ ಅರ್ಥ, ಆರೋಗ್ಯ ವಿಮೆಯ ರೂಪರೇಷೆಗಳಲ್ಲಿ ಎಲ್‌ಐಸಿ ಮಾಡುವ ನಿರ್ಧಾರ ಪ್ರಮುಖವಾಗಿರುವುದಿಲ್ಲ.





ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಆರೋಗ್ಯ ವಿಮಾ ಕ್ಷೇತ್ರವನ್ನು ಪ್ರವೇಶಿಸಲು ಸಜ್ಜಾಗಿದ್ದು, ಆರೋಗ್ಯ ವಿಮಾದಾರರನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತು ಚರ್ಚೆಗಳು ಅಂತಿಮ ಹಂತದಲ್ಲಿವೆ ಎಂದು ಸಿಇಒ ಸಿದ್ಧಾರ್ಥ ಮೊಹಾಂತಿ ತಿಳಿಸಿದ್ದಾರೆ.






error: Content is protected !!
Scroll to Top