ಕೊಂಚ ಇಳಿಮುಖವಾದ ಚಿನ್ನದ ಬೆಲೆ; ಇಂದಿನ ದರ ಇಷ್ಟಿದೆ

(ನ್ಯೂಸ್ ಕಡಬ) newskadaba.com ಮಾ. 15 : ಬೆಂಗಳೂರು: ಶುಕ್ರವಾರ ಭಾರಿ ಏರಿಕೆಯಾಗಿದ್ದ ಚಿನ್ನದ ದರ (Gold Price Today) ಇಂದು (ಮಾ. 15) ಕೊಂಚ ಕಡಿಮೆಯಾಗಿದ್ದು ಗ್ರಾಹಕರಿಗೆ ತುಸು ಸಮಾಧಾನ ತಂದಿದೆ. ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 10 ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 11 ರೂ. ಇಳಿಕೆಯಾಗಿದೆ.

ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 8,220 ರೂ. ತಲುಪಿದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 8,967 ರೂ. ಆಗಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನ 65,760 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 82,200 ರೂ. ಮತ್ತು 100 ಗ್ರಾಂಗೆ 8,22,000 ರೂ. ನೀಡಬೇಕಾಗುತ್ತದೆ. ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನ71,736 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 89,670 ರೂ. ಮತ್ತು 100 ಗ್ರಾಂಗೆ 8,97,800 ರೂ. ಪಾವತಿಸಬೇಕಾಗುತ್ತದೆ.

error: Content is protected !!
Scroll to Top