(ನ್ಯೂಸ್ ಕಡಬ) newskadaba.com ಮಾ. 15 : ಬೆಂಗಳೂರು: ಆಸ್ತಿ ಮಾಲೀಕರು ಇಲ್ಲಿ ಗಮನಿಸಬೇಕಾದ ಸುದ್ದಿ ಇದೆ. ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಇದ್ದರೆ ಮಾ.31ರೊಳಗೆ ತೆರಿಗೆ ಪಾವತಿಸಬೇಕು. ಇಲ್ಲದಿದ್ದರೆ ಏಪ್ರಿಲ್ 1ರಿಂದ ಶೇ.100ರಷ್ಟು ದಂಡ ಬೀಳಲಿದೆ. ಅಂದರೆ ದುಪ್ಪಟ್ಟು ಮೊತ್ತ ಕಟ್ಟಬೇಕಾಗಲಿದೆ. ಈ ಕುರಿತು ಸೂಚನೆ ನೀಡಿದೆ. ಏಪ್ರಿಲ್ 1ರಿಂದ ₹100ಕ್ಕೆ 100 ದಂಡ ವಿಧಿಸುವ ಹಾಗೂ ವಾರ್ಷಿಕ ಬಾಕಿ ಮೊತ್ತಕ್ಕೆ ಶೇ.9 ರಿಂದ 15 ರಷ್ಟು ದಂಡ ವಿಧಿಸುವ ನಿಯಮ ಜಾರಿಗೆ ಬರುತ್ತಿದೆ.


ರಾಜ್ಯ ಸರ್ಕಾರವು ಕಳೆದ ವರ್ಷ ಬಿಬಿಎಂಪಿಯ ಕಾಯ್ದೆಗೆ ತಿದ್ದುಪಡಿ ಮಾಡಿ ಆಸ್ತಿ ತೆರಿಗೆ ಮೇಲಿನ ದಂಡ ಪ್ರಮಾಣವನ್ನು ಎರಡರಿಂದ ಒಂದು ಪಟ್ಟಿಗೆ ಇಳಿಕೆ ಮಾಡಿತ್ತು. ಜತೆಗೆ, ಒಂದು ವರ್ಷ ಕಾಲ ದಂಡ ಪ್ರಮಾಣವನ್ನು ₹100ಕ್ಕೆ ನಿಗದಿ ಪಡಿಸಿ ವಿನಾಯಿತಿ ನೀಡಿತ್ತು. ಇದೀಗ ಮಾ.31ಕ್ಕೆ ವಿನಾಯಿತಿ ಅವಧಿ ಮುಕ್ತಾಯಗೊಳ್ಳುತ್ತಿದೆ. ಹೀಗಾಗಿ, ಏಪ್ರಿಲ್ 1 ರಿಂದ ₹100ಕ್ಕೆ 100 ದಂಡ ವಿಧಿಸುವ ಹಾಗೂ ವಾರ್ಷಿಕ ಬಾಕಿ ಮೊತ್ತಕ್ಕೆ ಶೇ.9 ರಿಂದ 15 ರಷ್ಟು ದಂಡ ವಿಧಿಸುವ ನಿಯಮ ಜಾರಿಗೆ ಬರುತ್ತಿದೆ.