ರೈಲು ಹೈಜಾಕ್: 16 ಉಗ್ರರನ್ನು ಹತ್ಯೆ ಮಾಡಿ 104 ಪ್ರಯಾಣಿಕರನ್ನು ರಕ್ಷಿಸಿದ ಪಾಕ್ ಭದ್ರತಾ ಪಡೆ

(ನ್ಯೂಸ್ ಕಡಬ) newskadaba.com ಮಾ. 12: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಸುರಂಗವೊಂದರಲ್ಲಿ ಬಲೂಚ್ ಉಗ್ರರು ರೈಲನ್ನು ಅಪಹರಿಸಿದ್ದಾರೆ. ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆ ವೇಳೆ ಗುಂಡಿನ ಕಾಳಗದಲ್ಲಿ 16 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ರೈಲಿನಲ್ಲಿದ್ದ 104 ಪ್ರಯಾಣಿಕರನ್ನು ಭದ್ರತಾ ಪಡೆಗಳು ರಕ್ಷಿಸಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಒಂಬತ್ತು ಬೋಗಿಗಳಲ್ಲಿ ಸುಮಾರು 400 ಪ್ರಯಾಣಿಕರನ್ನು ಹೊತ್ತ ಜಾಫರ್ ಎಕ್ಸ್‌ಪ್ರೆಸ್ ಮಂಗಳವಾರ ಮಧ್ಯಾಹ್ನ ಕ್ವೆಟ್ಟಾದಿಂದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದಾಗ ಗುಡಾಲಾರ್ ಮತ್ತು ಪಿರು ಕುನ್ರಿಯ ಪರ್ವತ ಪ್ರದೇಶದ ಬಳಿ ಸುರಂಗದಲ್ಲಿ ಶಸ್ತ್ರಸಜ್ಜಿತ ಉಗ್ರರು ತಡೆದಿದ್ದರು.

error: Content is protected !!
Scroll to Top