(ನ್ಯೂಸ್ ಕಡಬ) newskadaba.com ಮಾ. 10 ಹೊಸದಿಲ್ಲಿ: ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡುವ ಪವರ್‌ಫುಲ್ ದಾಖಲೆಗಳಲ್ಲಿ ಪಾಸ್‌ಪೋರ್ಟ್ ಪ್ರಮುಖವಾದುದು. ಒಂದು ರಾಷ್ಟ್ರ ತನ್ನ ದೇಶದ ನಾಗರಿಕರಿಗೆ ಇನ್ನೊಂದು ದೇಶಕ್ಕೆ ಪ್ರವಾಸ ಮಾಡಲು ಮತ್ತು ಈ ವ್ಯಕ್ತಿಯ ಗುರುತು ಮತ್ತು ರಾಷ್ಟ್ರೀಯತೆಯನ್ನು ಗುರುತಿಸಲು ನೀಡಲಾಗುವ ಅತಿ ಮುಖ್ಯ ದಾಖಲೆಯಲ್ಲಿ ಪಾಸ್‌ಪೋರ್ಟ್ ಪ್ರಮುಖವಾದುದು. ಹೊಸ ನಿಯಮದ ಪ್ರಕಾರ ಆನ್‌ಲೈನ್ ಮೂಲಕ ಹೊಸ ಪಾಸ್‌ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸಿದ್ದರೆ ಇನ್ನುಮುಂದೆ ಮನೆಗೆ ಬಂದು ಸೇರಲಿದೆ. ಇದರಲ್ಲಿ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ಹುಟ್ಟಿದ ಸ್ಥಳಗಳು ಆ ವ್ಯಕ್ತಿ ಗುರುತಿನ ಅಂಶಗಳನ್ನು ಹೊಂದಿರುತ್ತದೆ. ಈ ಪಾಸ್‌ಪೋರ್ಟ್ ಕುರಿತಾದ ಹೊಸ ಅಪ್‌ಡೇಟ್ ಹೊರಬಿದ್ದಿದೆ. ವಿದೇಶಾಂಗ ಸಚಿವಾಲಯ ಪಾಸ್‌ಪೋರ್ಟ್ ಪಡೆಯಲು ಇದ್ದ ಕೆಲವೊಂದು ಕಠಿಣ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿದೆ. ಕೆಲವೊಂದು ದಾಖಲೆಗಳನ್ನು ಪಡೆಯುವುದು ತೀರಾ ಕಷ್ಟವಾಗುತ್ತಿದೆ ಎನ್ನುವ ದೂರಿನ ಹಿನ್ನಲೆಯಲ್ಲಿ ಸಚಿವಾಲಯ ಈ ಮಹತ್ವದ ಬದಲಾವಣೆಯನ್ನು ತಂದಿದೆ.



ಹೌದು, ಪಾಸ್‌ಪೋರ್ಟ್ ಪಡೆಯುವ ನೀತಿಯನ್ನು ಸಡಿಲಿಕೆ ಮಾಡಿರುವ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆ ಮೂಲಕ ಪಾಸ್‌ಪೋರ್ಟ್ ನಿಯಮವನ್ನು ತಿದ್ದುಪಡಿ ಮಾಡಿದೆ. ಹೊಸ ರೂಲ್ಸ್ ಪ್ರಕಾರ ಇನ್ನುಮುಂದೆ ಜನನ ಪ್ರಮಾಣ ಪತ್ರದ ದಾಖಲೆಯನ್ನು ಮಾತ್ರ ಸಾಕ್ಷಿಯಾಗಿ ಸ್ವೀಕರಿಸುವಂತೆ ಸೂಚಿಸಿ ಆದೇಶ ಹೊರಡಿಸಿದೆ. ಈ ನಿಯಮ 2023ರ ಅಕ್ಟೋಬರ್ 1ರ ಬಳಿಕ ಜನಿಸಿದವರಿಗೆ ಮಾತ್ರ ಅನ್ವಯ ಆಗಲಿದೆ. 1980ರ ಪಾಸ್‌ಪೋರ್ಟ್ ನಿಯಮಗಳಿಗೆ ತಿದ್ದುಪಡಿ ಜಾರಿಗೊಳಿಸುವ ಕುರಿತು ಟಿಪ್ಪಣಿ ಹೊರಡಿಸಲಾಗಿದೆ. ಅಧಿಕೃತ ಗೆಜೆಟ್‌ನಲ್ಲಿ ತಿದ್ದುಪಡಿ ಪ್ರಕಟಿಸಿದ ನಂತರ ಹೊಸ ನಿಯಮಗಳು ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.