(ನ್ಯೂಸ್ ಕಡಬ) newskadaba.com ಮಾ. 06 ಬೆಂಗಳೂರು: ರಾಜ್ಯದಲ್ಲಿ 25 ಪಾಕಿಸ್ತಾನಿಗಳು ಸೇರಿದಂತೆ 137 ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
ವಿದೇಶಾಂಗ ಸಚಿವಾಲಯದ ಮೂಲಕ ಅವರ ರಾಯಭಾರ ಕಚೇರಿಗಳಿಗೆ ಮಾಹಿತಿ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಅವರನ್ನು ಶೀಘ್ರದಲ್ಲೇ ಆಯಾ ದೇಶಗಳಿಗೆ ಗಡಿಪಾರು ಮಾಡಲಾಗುವುದು ಎಂದು ವಿಧಾನಸಭೆಯಲ್ಲಿ ಹಿರಿಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ 84, ಬೆಂಗಳೂರು ಗ್ರಾಮಾಂತರದಲ್ಲಿ 27, ಶಿವಮೊಗ್ಗದಲ್ಲಿ 12, ಹಾಸನದಲ್ಲಿ ಮೂವರು, ಮಂಗಳೂರಿನಲ್ಲಿ ಒಬ್ಬರು ಮತ್ತು ಉಡುಪಿಯಲ್ಲಿ 10 ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ವಿಜಯಪುರ ಜಿಲ್ಲೆಯಲ್ಲಿ, 2016 ರಲ್ಲಿ 33 ಬಾಂಗ್ಲಾದೇಶಿಗಳನ್ನು ಪತ್ತೆಹಚ್ಚಲಾಗಿದ್ದು, ಅವರೆಲ್ಲರನ್ನೂ ಆಗ ಗಡೀಪಾರು ಮಾಡಲಾಗಿದೆ . “ವಿಜಯಪುರದಲ್ಲಿ ಈಗ ಯಾವುದೇ ಅಕ್ರಮ ವಲಸಿಗರು ಇಲ್ಲ” ಎಂದು ಅವರು ಸ್ಪಷ್ಟಪಡಿಸಿದರು.