‘ಜನೌಷಧಿ ಮಾದರಿಯಲ್ಲೇ ಜಾನುವಾರುಗಳಿಗೆ ಪಶು ಔಷಧಿ’- ಕೇಂದ್ರ ಅನುಮೋದನೆ

(ನ್ಯೂಸ್ ಕಡಬ) newskadaba.com ಮಾ. 06 ಜನಸಾಮಾನ್ಯರಿಗೆ ಅಗ್ಗದ ದರದಲ್ಲಿ ಸಿಗುವ ‘ಜನೌಷಧಿ’ ಮಾದರಿಯಲ್ಲೇ ಜಾನುವಾರುಗಳಿಗೆ ‘ಪಶು ಔಷಧಿ’ ಹೆಸರಿನಲ್ಲಿ ಜೆನೆರಿಕ್‌ ಔಷಧಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ತಿರ್ಮಾನಿಸಿದೆ.

ಈ ಯೋಜನೆಗಾಗಿ 2026ರ ಮಾರ್ಚ್‌ 31ರ ಹೊತ್ತಿಗೆ 75 ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಪಶು ಆರೋಗ್ಯ ಮತ್ತು ರೋಗ ನಿಯಂತ್ರಣದ ಕಾರ್ಯಕ್ರಮ ಪರಿಷ್ಕರಣೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಕುರಿತು ಸಭೆಯ ಬಳಿಕ ಮಾಹಿತಿ ನೀಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ‘ಜನ ಔಷಧಿಯಂತೆ ಪಶು ಔಷಧಿ ಎಂಬ ಯೋಜನೆಯನ್ನು ಆರಂಭಿಸಲಾಗಿದ್ದು, ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ಔಷಧಿಗಳನ್ನು ಒದಗಿಸಲಾಗುವುದು.

error: Content is protected !!
Scroll to Top