ಕಾಣಿಯೂರು: ಬಿಜೆಪಿ ಪ್ರಮುಖ ಕಾರ್ಯಕತರ ಸಭೆ

(ನ್ಯೂಸ್ ಕಡಬ) newskadaba.com ಸವಣೂರು, ಮಾ.30. ಮುಂಬರುವ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಬೆಳಂದೂರು ಮಹಾಶಕ್ತಿ ಕೇಂದ್ರದ ಪ್ರಮುಖ ಕಾರ್ಯಕರ್ತರ ಸಭೆ ಗುರುವಾರ ಕಾಣಿಯೂರು ಲಕ್ಷ್ಮಿ ನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು.

ಚುನಾವಣಾ ಸಂಯೋಜಕ ಕಾಸರಗೋಡು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಸುಧಾಮ, ವಿಸ್ತಾರಕ್ ಪುರಂದರ ತೆಕ್ಕಟ್ಟೆ, ಹಿರಿಯ ಮುಂದಾಳು ಶ್ರೀನಿವಾಸ್ ಉಬರಡ್ಕ ಅವರು ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಿದರು.
ಸಭೆಯಲ್ಲಿ ವಿಧಾನ ಸಭಾ ಚುನಾಚಣೆಯ ಹಿನ್ನಲೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿನ ಕಾರ್ಯತಂತ್ರ, ಸಂಘಟನಾತ್ಮಕವಾಗಿ ತೊಡಗಿಸಿಕೊಳ್ಳುವಿಕೆ ಹಾಗೂ ಚುನಾವಣೆ ಸಂಭಂಧಪಟ್ಟ ಕೆಲಸ ಕಾರ್ಯಗಳ ವೇಗ ಹೆಚ್ಚಿಸಿಕೊಳ್ಳುವ ಕುರಿತು ನಿರ್ಧರಿಸಲಾಯಿತು.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜನಪರ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ವಿವಿಧ ಯೋಜನೆಗಳು, ಸುಳ್ಯ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ದಿ ಕಾರ್ಯಗಳನ್ನೂ ಮನೆಮನೆ ತಿಳಿಸುವ ಮೂಲಕ ಪಕ್ಷದ ಗೆಲುವಿನ ಅಂತರ ಹೆಚ್ಚಿಸುವಲ್ಲಿ ಪಕ್ಷದ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು. ನವಶಕ್ತಿ ಕಾರ್ಯಕರ್ತರು, ಪೇಜ್ ಪ್ರಮುಖರು ಚುನಾವಣೆಯ ಮತಬೇಟೆಯ ರೂಪುರೇಷೆ ಸಿದ್ದ ಪಡಿಸಿ ಕಾರ್ಯೋನ್ಮುಖರಾಗುವ ಕುರಿತೂ ಕಾರ್ಯಕರ್ತರಿಗೆ ತಿಳಿಸಲಾಯಿತು.

Also Read  ಮಕ್ಕಳನ್ನು ಸಮಾಜಕ್ಕೆ ಪೂರಕವಾಗಿ ರೂಪಿಸುವ ಶಿಕ್ಷಣ ಬೇಕಾಗಿದೆ: ಸುಬ್ರಹ್ಮಣ್ಯಶ್ರೀ

ವೇದಿಕೆಯಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಅಧ್ಯಕ್ಷ ,ಜಿ.ಪಂ.ಸದಸ್ಯರಾದ ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ, ಬೆಳಂದೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಧರ್ಮೇಂದ್ರ ಕಟ್ಟತ್ತಾರು, ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ ಉಪಸ್ಥಿತರಿದ್ದರು. ಸಭೆಯಲ್ಲಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಪಕ್ಷದ ಗ್ರಾ.ಪಂ.ಸಮಿತಿ, ಬೂತ್ ಸಮಿತಿ ಪದಾಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.ಬಿಜೆಪಿ ಸುಳ್ಯ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ಸ್ವಾಗತಿಸಿ, ವಂದಿಸಿದರು.

Also Read  ರಂಗತ್ತಮಲೆ :ನಿಯಂತ್ರಣ ತಪ್ಪಿ ತೋಟಕ್ಕೆ ಬಿದ್ದ ಜೀಪು

error: Content is protected !!
Scroll to Top