ಏ. 2ರಿಂದ ಭಾರತ, ಚೀನಾ ದೇಶದ ಮೇಲೆ ಪ್ರತಿ ಸುಂಕ- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ

(ನ್ಯೂಸ್ ಕಡಬ) newskadaba.com ಮಾ. 05: ವಾಷಿಂಗ್ಟನ್: ಭಾರತ, ಚೀನಾ ಸೇರಿದಂತೆ ಮತ್ತಿತರ ರಾಷ್ಟ್ರಗಳು ಅಮೆರಿಕದ ಉತ್ಪನ್ನಗಳ ಬಗ್ಗೆ ಹೆಚ್ಚಿ ಸುಂಕ ವಿಧಿಸುವ ಬಗ್ಗೆ ಕಿಡಿಕಾರಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದು ಅಮೆರಿಕಕ್ಕೆ ಆಗುತ್ತಿರುವ ‘ಅನ್ಯಾಯ ಎಂದಿದ್ದು, ಮುಂದಿನ ತಿಂಗಳಿನಿಂದ ಪ್ರತಿಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.

ಪ್ರತಿ ಸುಂಕ ಏಪ್ರಿಲ್ 2 ರಂದು ಜಾರಿಗೆ ಬರಲಿದ್ದು, ಅಮೆರಿಕದ ಉತ್ಪನ್ನಗಳ ಮೇಲೆ ಸುಂಕದಷ್ಟೇ ವಿದೇಶಿ ರಾಷ್ಟ್ರಗಳ ಉತ್ಪನ್ನಗಳ ಮೇಲೆ ಸುಂಕ ವಿಧಿಸಲಾಗುವುದು. ಇತರ ದೇಶಗಳು ದಶಕಗಳಿಂದಲೂ ನಮ್ಮ ಉತ್ಪನ್ನಗಳ ಮೇಲೆ ಸುಂಕ ವಿಧಿಸುತ್ತಲೇ ಇವೆ. ಈಗ ಪ್ರತಿಯಾಗಿ ಅಂತಹ ರಾಷ್ಟ್ರಗಳ ಉತ್ಪನ್ನಗಳ ಮೇಲೆ ಸುಂಕು ವಿಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.

Also Read  ಅರಬ್ಬಿ ಸಮುದ್ರದಲ್ಲಿ ಮತ್ತೆ ಸೈಕ್ಲೋನ್: ಇನ್ನೂ 4 ದಿನ ಮಳೆ ಸಾಧ್ಯ

ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾದ ಬಳಿಕ ಮಂಗಳವಾರ ರಾತ್ರಿ ಕಾಂಗ್ರೆಸ್ ನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಯುರೋಪಿಯನ್ ಒಕ್ಕೂಟ, ಚೀನಾ, ಬ್ರೆಜಿಲ್, ಭಾರತ, ಬ್ರೆಜಿಲ್, ಭಾರತ, ಮೆಕ್ಸಿಕೊ ಮತ್ತು ಕೆನಡಾ ಸೇರಿದಂತೆ ಹಲವು ದೇಶಗಳು ನಾವು ಅವರ ಉತ್ಪನ್ನಗಳ ಮೇಲೆ ವಿಧಿಸುವುದಕ್ಕಿಂತ ಹೆಚ್ಚಿನ ಸುಂಕ ವಿಧಿಸುತ್ತವೆ. ಇದು ಅನ್ಯಾಯವಾಗಿದೆ.

error: Content is protected !!
Scroll to Top