ಆಭರಣಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ಬೆಲೆ ಮತ್ತೆ ಇಳಿಕೆ

(ನ್ಯೂಸ್ ಕಡಬ) newskadaba.com ಮಾ. 01 ಬೆಂಗಳೂರು: ಕೆಲವು ದಿನಗಳಿಂದ ಏರುಮುಖವಾಗಿ ಸಾಗುತ್ತಲೇ ಇದ್ದ ಚಿನ್ನದ ದರ ಇದೀಗ ಇಳಿಕೆಯತ್ತ ಸಾಗಿದೆ. ಶುಕ್ರವಾರ ಕಡಿಮೆಯಾಗಿದ್ದ ಚಿನ್ನದ ದರ ಇಂದು ಕೂಡ (ಮಾ. 1) ಕೊಂಚ ಅಗ್ಗವಾಗಿದೆ . ಶನಿವಾರ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ ಕ್ರಮವಾಗಿ 20 ರೂ. ಮತ್ತು 22 ರೂ. ಇಳಿಕೆಯಾಗಿದೆ.

ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,940 ರೂ.ಗೆ ತಲುಪಿದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 8,662 ರೂ. ಪಾವತಿಸಬೇಕು. 22 ಕ್ಯಾರಟ್‌ನ 8 ಗ್ರಾಂ ಚಿನ್ನ 63,520 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 79,400 ರೂ. ಮತ್ತು 100 ಗ್ರಾಂಗೆ 7,94,000 ರೂ. ಪಾವತಿಸಬೇಕಾಗುತ್ತದೆ. ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನ 69,296 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 86,620 ರೂ. ಮತ್ತು 100 ಗ್ರಾಂಗೆ 8,66,200 ರೂ. ನೀಡಬೇಕಾಗುತ್ತದೆ.

Also Read  ಅಷ್ಟಮಿ, ಚೌತಿ, ವರಮಹಾಲಕ್ಷ್ಮೀ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸುವಂತಿಲ್ಲ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ

error: Content is protected !!
Scroll to Top