ಇಂದಿನಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭ

(ನ್ಯೂಸ್ ಕಡಬ) newskadaba.com ಮಾ. 01 ಬೆಂಗಳೂರು : ಮಾರ್ಚ್ 1 ರ ಇಂದಿನಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದ್ದು, ಈ ಬಾರಿ ನಾನಾ ದೇಶಗಳ ಹಾಗೂ ನಿರ್ದೇಶಕರ 400 ಸಿನಿಮಾಗಳು ಪ್ರದರ್ಶನಗೊಳ್ಳಲಿದೆ. ಇಂದು ಸಂಜೆ 5 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಲಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದು, ಚಿತ್ರೋತ್ಸವಕ್ಕೆ ಸಂಬಂಧಿಸಿದ ಐದು ಪುಸ್ತಕಗಳನ್ನು ನಟ ಶಿವರಾಜ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ.

ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿ ಕಿಶೋರ್ ಕುಮಾರ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 5 ಖ್ಯಾತ ಸಂಗೀತ ಸಂಯೋಜಕ ಹಾಗೂ ಪಿಟೀಲು ವಾದಕ ಪದ್ಮಭೂಷಣ ಡಾ. ಎಲ್. ಸುಬ್ರಮಣ್ಯಂ ಹಾಗೂ ಖ್ಯಾತ ಕಾಯಕಿ ಪದ್ಮಶ್ರೀ ಕವಿತಾ ಸುಬ್ರಮಣ್ಯಂ ಅವರಿಂದ ಸಂಗೀತ ರಸ ಸಂಜೆ ನಡೆಯಲಿದೆ. ಈ ಬಾರಿ ಮಹಿಳಾ ಚಲನಚಿತ್ರದ ಬಗ್ಗೆ ನಟಿ ರಮ್ಯಾ, ನಂದಿನಿ ರೆಡ್ಡಿ ಸಂವಾದ ನಡೆಸಲಿದ್ದಾರೆ. ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. 2024 ರ ಜನಪ್ರಿಯ ಸಿನಿಮಾ ‘ಅಮರನ್’ ಚಿತ್ರದ ನಿರ್ದೇಶಕರು ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Also Read  ಮೂಗಿಗೆ ಹಾಕುವ ಕೊರೋನಾ ಲಸಿಕೆಗೆ ದರ ನಿಗದಿ ➤ ಖಾಸಗಿ ಆಸ್ಪತ್ರೆಯಲ್ಲಿ ರೂ. 800 ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ರೂ.325

error: Content is protected !!
Scroll to Top