(ನ್ಯೂಸ್ ಕಡಬ) newskadaba.com ಫೆ. 26: ಅಮೃತಸರ: ಪಂಜಾಬ್‌ನ ಪಠಾಣ್‌ಕೋಟ್‌ನ ಅಂತರಾಷ್ಟ್ರೀಯ ಗಡಿಯಲ್ಲಿ ಬುಧವಾರ ಮುಂಜಾನೆ ಬಿಎಸ್‌ಎಫ್ ಪಡೆಗಳು ಪಾಕಿಸ್ತಾನಿ ಒಳನುಸುಳುಕೋರನನ್ನು ಗುಂಡಿಕ್ಕಿ ಕೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಅಂತಾರಾಷ್ಟ್ರೀಯ ಗಡಿಯ ಔಟ್ ಪೋಸ್ಟ್ ತಶ್ಪತನ್ ಪ್ರದೇಶದಲ್ಲಿ ಯಾರೋ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಡಿ ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ ಬಿಎಸ್ ಎಫ್ ಪಡೆಗಳ ಪ್ರತಿರೋಧದ ನಡುವೆಯೂ ನುಸುಳುಕೋರ ದೇಶದ ಗಡಿಯೊಳಗೆ ಒಳ ನುಗ್ಗಿದ್ದಾನೆ. ಬಳಿಕ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು,ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.